ಬೆಂಗಳೂರು (ಸೆ,28):ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮದ ರೈತ ಸಂಗಣ್ಣ ಶಿವಪ್ಪ ಚಳ್ಳಗಿ ಯವರಿಗೆ ಕರ್ನಾಟಕ ಭೂ ನ್ಯಾಯ ಮಂಡಳಿಯಿಂದ ನೋಟಿಸ ನೀಡಲಾಗಿತ್ತು. ಆತ ಅಮರೇಶ ಕಾಮನಕೇರಿ ಯವರ ಮುಖಾಂತರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ ಕುಮಾರ ಕಲ್ಗದೆ ರವರನು ಭೇಟಿಯಾಗಿ ತಮಗಾದ ಸಮಸ್ಯೆ ತಿಳಿಸಿದ್ದಾರೆ.
ಇದಕ್ಕೆ ತಕ್ಷಣ ಸ್ಪಂದಿಸಿದ ಅರುಣ ಕುಮಾರ ಕಲ್ಗದೆರವರು ರೈತನ ಪರ ವಾದ ಮಾಡಲು ವಕೀಲರನ್ನು ನೇಮಿಸಿ ಕೊಟ್ಟು ನ್ಯಾಯ ಕೊಡಿಸಿದ್ದಾರೆ. ರೈತ ಸಂಗಣ್ಣ ತಂದೆಯಾದ ಶಿವಪ್ಪ ನವರು 1978 ರಿಂದ ಹಗರಟಗಿ ಗ್ರಾಮದ ಸರ್ವೇ ನಂ ರಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದಾರೆ. ಭೂ ಹಪ್ತಾ ಕೂಡ ಕಟ್ಟಿ ಕೊಂಡು ಬಂದಿದ್ದಾರೆ.1993ರಲ್ಲಿ ಇವರಿಗೆ ಸರ್ಕಾರವೇ ಇವರಿಗೆ 3 ಹೆಕ್ಟರ್ ಭೂಮಿಯನ್ನು ಮಂಜೂರು ಮಾಡಿದೆ.
ಆದರೆ ಕಾನೂನಿನ ತೊಡಕು ಎದುರಾದ ಕಾರಣ ರೈತ ಸಂಗಣ್ಣ ಚಳ್ಳಗಿ ಅರುಣ ಕುಮಾರರಿಗೆ ಪೋನ್ ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದರು. ಇವರ ಸಮಸ್ಯೆಗೆ ಸ್ಪಂದಿಸಿ ಬೆಂಗಳೂರುಗೆ ಕರೆಸಿಕೊಂಡಿ ಕಾನೂನು ನೇರವು ನೀಡಿ ಬಡ ರೈತನ ಪರ ನ್ಯಾಯ ಕೊಟ್ಟಿರುವುದು ಶ್ಲಾಘಿನೀಯ.