ಕಮಲಶಿಲೆ: ಕಲಾವಿದ ಚೇತನ್ ಕುಮಾರ್ ಪ್ರತಿಭೆಯನ್ನು ಶ್ಲಾಘಿಸಿದ ಬೈಂದೂರಿನ ಶಾಸಕ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ . ಕಮಲಶಿಲೆ ಹಳ್ಳಿಹೊಳೆ ಮಾರ್ಗದ ಪಕ್ಕದಲ್ಲಿ ಇರುವ ಕಲ್ಲು ಬಂಡೆಗೆ ತನ್ನ ಕಲೆಯ ಕೈಚಳಕ ತೊರಿಸಿ ಸ್ರಜನಶೀಲತೆ ಪ್ರದರ್ಶಿಸಿದ ಯುವ ಕಲಾವಿದ ಚೇತನ್ ಕುಮಾರ್ ಪ್ರತಿಭೆ ಶ್ಲಾಘನೀಯ ಎಂದು ಶಾಸಕ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು. ಯುವಕ ರಚಿಸಿದ ಕಲಾಕ್ರತಿಯ ಜಾಗಕ್ಕೆ ಭೇಟಿ ನೀಡಿ ವೀಕ್ಷಿಸಿದ ಶಾಸಕರು ಯುವಕನ ಕಲಾ ಭವಿಷ್ಯಕ್ಕೆ ಶುಭ ಹಾರೈಸಿದರು. ಅದೇ ಸಂಧರ್ಭದಲ್ಲಿ ಚೇತನ್ ರನ್ನು ಶಾಸಕರು ಸಮ್ಮಾನಿಸಿ ಗೌರವಿಸಿದರು.












