ಕುಂದಾಪುರ (ಆ, 03) : ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ Rtn. ಸಾಲಗದ್ದೆ ಶಶಿಧರ ಶೆಟ್ಟಿ ಪ್ರಾಯೋಜಕತ್ವದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಳೂರು, ತೋಪ್ಲು ಹಾಗೂ ಹಕ್ಲಾಡಿ ಶಾಲಾ ಮಕ್ಕಳಿಗೆ ಅಗಸ್ಟ್ 2 ರಂದು ನೋಟ್ ಬುಕ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ Rtn. ಶಶಿಧರ ಹೆಗ್ಡೆಯವರು ವಹಿಸಿಕೊಂಡು ಶುಭಹಾರೈಸಿ ಮಾತನಾಡಿದರು.
ಜಿಲ್ಲಾ ಪ್ರಶಸ್ತಿ ವಿಜೇತ, ಶಿಕ್ಷಕ ರೋಟೇರಿಯನ್ ಸಾಲಗದ್ದೆ ಶಶಿಧರ ಶೆಟ್ಟಿ, ಮಾಜಿ ಅಧ್ಯಕ್ಷರಾದ ಗಣೇಶ ಐತಾಳರು, ರೋಟರಿ ಕಾರ್ಯದರ್ಶಿ Rtn ಕುಮಾರ್ .ಎಸ್. ಕಾಂಚನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶೋಭಾ, ಪಂಚಾಯತ್ ಸದಸ್ಯ ಬಸವ ನಾಯ್ಕ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ರಾಜೀವ್ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದಗೈದರು.