ಕುಂದಾಪುರ (ಆ, 10 ) : ಇತ್ತೀಚಿಗೆ ಮಳೆಯ ಆರ್ಭಟದಿಂದ ನದಿಗೆ ಬಿದ್ದು ಹಳ್ನಾಡು ನಿವಾಸಿ ಅಶೋಕ್ ಮೃತಪಟ್ಟಿದ್ದು, ಆತನ ಮನೆಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಭೇಟಿ ನೀಡಿ ಐದು ಲಕ್ಷ ರೂಪಾಯಿಗಳ ಚೆಕ್ ವಿತರಿಸಿ ಮನೆಯವರಿಗೆ ಸಾಂತ್ವನ ತಿಳಿಸಿದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ರಾಘವೇಂದ್ರ ದೇವಾಡಿಗ, ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ್ ಪುತ್ರನ್, ಸಾಮ್ರಾಟ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ದಿನೇಶ್ ಆಚಾರ್, ಪ್ರಕಾಶ್ ಶೆಟ್ಟಿ ಜೋರ್ಮಕ್ಕಿ, ಮತ್ತಿತರರು ಉಪಸ್ಥಿತರಿದ್ದರು.