ಮಲ್ಪೆ (ಆ,19): ಉಡುಪಿ ಜಿಲ್ಲೆಯ ಬೆಳ್ಮಣ್ಣು ಗ್ರಾಮದ ಸಂದೀಪ ದೇವಾಡಿಗ ಹಾಗೂ ರಂಜಿತಾ ಸಂದೀಪ್ ದಂಪತಿಯ ಪುಟ್ಟ ಕಂದಮ್ಮ ಮಾಸ್ಟರ್ ಮಿಥಾಂಶ್ ನನ್ನು ಉಳಿಸಿಕೊಳ್ಳೋಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಈ ಮಗುವಿನ ಚಿಕಿತ್ಸಾ ವೆಚ್ಚ ಬರೊಬ್ಬರಿ 16 ಕೋಟಿ ರೂಪಾಯಿ ಅಗತ್ಯವಿತ್ತು. ಅಷ್ಟು ಹಣ ಹೊಂದಿಸಲು ಹೆತ್ತವರು ಸಾರ್ವಜನಿಕರಲ್ಲಿ ಸಹಾಯ ಕೋರಿದ್ದರು. ಆದರೆ 16 ಕೋಟಿ ಸಂಗ್ರಹ ಆಗಲಿಲ್ಲ. ಕೇವಲ 48 ಲಕ್ಷ ರೂಪಾಯಿ ಮಾತ್ರ ಸಾರ್ವಜನಿಕರಿಂದ ಸಂಗ್ರಹಿಸಲಾಗಿತ್ತು. ದುರಾದ್ರಷ್ಠವಷಾತ್ ಮಗುವಿನ್ನು ಉಳಿಸಿಕೊಳ್ಳಲು ಆಗಲಿಲ್ಲ.
ಆದರೆ ಮಗುವಿನ ಹೆತ್ತವರು ತೆಗೆದುಕೊಂಡ ನಿರ್ಧಾರ ನಿಜಕ್ಕೂ ಪ್ರಶಂಸನೀಯ. ಮಗುವಿನ ಚಿಕಿತ್ಸೆಗಾಗಿ ಸಾರ್ವಜನಿಕರಿಂದ ಸಂಗ್ರಹಿಸಲಾದ 48 ಲಕ್ಷ ರೂಪಾಯಿ ಹಣವನ್ನು ಮಗುವಿನ ನೆನಪಿಗಾಗಿ ಸಮಾಜ ಸೇವಾ ಸಂಸ್ಥೆಗೆ ನೀಡುವುದರ ಮಾನವೀಯ ನೆಲೆಯ ನಿರ್ಧಾರಕ್ಕೆ ಹ್ಯಾಟ್ಸ ಆಫ್ ಹೇಳಲೇ ಬೇಕು.
ಜೀವರಕ್ಷಕ ,ಆಪಧ್ಭಾಂಧವ ಈಶ್ವರ ಮಲ್ಪೆಯವರು ಬಂದರು, ಮೀನುಗಾರಿಕಾ ಇಲಾಖೆ ಮತ್ತು ಪೊಲೀಸ್ ಇಲಾಖೆ ವತಿಯಿಂದ ತುರ್ತ ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ಒಂದು ಅಂಬ್ಯುಲೆನ್ಸ್ ನ ಅವಶ್ಯಕತೆ ಯ ಕುರಿತು ತಿಳಿಸಿದ್ದರು. ಆದರೆ ಇದನ್ನು ಇಡೇರಿಸಿದ್ದು ಮಗುವನ್ನು ಕಳೆದುಕೊಂಡ ಪೋಷಕರು ಹಾಗೂ ಸತ್ಯದ ತುಳುವೆರ್ ತಂಡ. ಒಂದು ಸಂಸ್ಥೆಗೆ ಮಾನವೀಯ ನೆಲೆಯ ಕೋರಿಕೆಯನ್ನು ಇಡೇರಿಸುವ ಸಲುವಾಗಿ ಸಂದೀಪ್ ದೇವಾಡಿಗ ಹಾಗೂ ರಂಜಿತಾ ಸಂದೀಪ್ ದಂಪತಿ ಆಗಸ್ಟ್ 15ರಂದು ಈಶ್ವರ್ ಮಲ್ಪೆ ಯವರಿಗೆ ಒಂದು ಅಂಬುಲೆನ್ಸ್ ಹಸ್ತಾಂತರ ಮಾಡಿದ್ದಾರೆ.
ಅಂಬುಲೆನ್ಸ್ ಸ್ವೀಕರಿಸಿದ ಈಶ್ವರ್ ಮಲ್ಪೆ ಯವರು ಮಾತಿಗೆ ಸಿಕ್ಕಾಗ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು .ಯಾರಾದರೂ ಸಹಾಯಕ್ಕಾಗಿ ನನಗೆ ಫೋನ್ ಕರೆ ಮಾಡಿದಾಗ ಅಂಬುಲೆನ್ಸ್ ನಲ್ಲಿ ಕೆಲವು ಜೀವರಕ್ಷಕ ಆಕ್ಸಿಜನ್ ಜೊತೆಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತದೆ. ಆ ಪುಣ್ಯಾತ್ಮರು ಹಲವು ಜನಗಳ ಪ್ರಾಣ ಉಳಿಸಲು ನನಗೆ ಅಂಬುಲೆನ್ಸ್ ಸೇವೆ ಮಾಡಿದ್ದಾರೆ. ಅವರಿಗೆ ಎಲ್ಲಾ ಕೆಲಸಗಳು ಶುಭವಾಗಲಿ ಮತ್ತು ಮಗುವನ್ನು ಕಳೆದುಕೊಂಡ ಅವರಿಗೆ ದೇವರು ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ .ಅವರು ಮಾನವೀಯ ನೆಲೆಯಲ್ಲಿ ಅಂಬುಲೆನ್ಸ್ ಹಸ್ತಾಂತರ ಮಾಡಿದ್ದಾರೆ. ಅವರ ಆಸೆಗಳನ್ನು ನಾನು ಪೂರ್ಣಗೊಳಿಸುತ್ತೇನೆ. ಈಗ ನನಗೆ ಎಮರ್ಜೆನ್ಸಿ ಕಾಲ್ ಬಂದಾಗ ಇದೆ ಅಂಬಲೆನ್ಸ್ ನಲ್ಲಿ ತೆರಳುತ್ತೇನೆ .
ನಿಸ್ವಾರ್ಥ ಸೇವೆಯಾಗಿ ದೂರದ ಊರುಗಳಿಗೆ ಹೋಗಲು ಅಂಬುಲೆನ್ಸ್ ಗೆ ಪೆಟ್ರೋಲ್ ಹಾಗೂ ಕೆಲವೊಮ್ಮೆ ನನಗೆ ಚಾಲಕರು ಬೇಕಾಗುತ್ತದೆ. ಚಾಲಕರಿಗೂ ಮತ್ತು ಪೆಟ್ರೋಲ್ ನನ್ನದೇ ಕಿಸೆಯಿಂದ ಖರ್ಚುವೆಚ್ಚವನ್ನು ಉಪಯೋಗಿಸುತ್ತಿದ್ದೇನೆ .ಇದನ್ನು ತಿಳಿದು ಪುಣೆಯಿಂದ ಶ್ರೀಮತಿ ಪ್ರೇಮ ಗೋವಿಂದ ಚಂದನ ರವರು ಆರಂಭಿಕ ನೆಲೆಯಲ್ಲಿ ಧನಸಹಾಯ ಮಾಡಿದ್ದಾರೆ. ಹಾಗಾಗಿ ಯಾರಾದರೂ ಪುಣ್ಯಾತ್ಮರು, ಸಮಾಜ ಸೇವಕರು ,ಸಾರ್ವಜನಿಕರು ಪೆಟ್ರೋಲ್ ಮತ್ತು ಚಾಲಕರ ಖರ್ಚು ವೆಚ್ಚಕ್ಕಾಗಿ ತಮ್ಮ ಯಥಾನುಶಕ್ತಿ ಏನಾದರೂ ಕೊಡುವುದಿದ್ದರೆ ಕೆಳಗೆ ನಮೂದಿಸಿರುವ ನನ್ನ ಫೋನ್ ಪೇ ಮತ್ತು ಗೂಗಲ್ ಪೇ ನಂಬರಿಗೆ ಪಾವತಿಸಬಹುದು ನಾನು ಪ್ರೀತಿಯಿಂದ ಸ್ವೀಕರಿಸುತ್ತಿದ್ದೇನೆ (phone pay no 9663434415) ಈ ನಂಬರ್ 24ಘಂಟೆ ನಿಮ್ಮ ಸೇವೆಯಲ್ಲಿ ಇರುತ್ತದೆ. ಯಾರಿಗಾದರೂ ನನ್ನ ಸೇವೆ ಬೇಕಾದಲ್ಲಿ ನನಗೆ ಕರೆ ಮಾಡಬಹುದು ಎಂದು ಈಶ್ವರ್ ಮಲ್ಪೆ ತಿಳಿಸಿದ್ದಾರೆ.
ಈಶ್ವರ್ ಮಲ್ಪೆಯವರ ಸಮಾಜಸೇವೆಯ ತುಡಿತ ಹಾಗೂ ಸಂದೀಪ ದೇವಾಡಿಗ ಹಾಗೂ ರಂಜಿತಾ ಸಂದೀಪ್ ದಂಪತಿಯ ಮಾನವೀಯ ನೆಲೆಯ ಕಾರ್ಯ ನಿಜಕ್ಕೂ ಪ್ರಶಂಸನೀಯ.