ಕುಂದಾಪುರ (ಆ,21): ಇಲ್ಲಿನ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಓಣಂ ಹಬ್ಬವನ್ನು ಕಾಲೇಜಿನ ಐಕ್ಯೂಎಸಿ ಘಟಕ ಹಾಗೂ ಹಿಂದಿ ವಿಭಾಗದ ಆಯೋಜನೆಯಲ್ಲಿ ಆಗಸ್ಟ್,21 ರಂದು ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕೆ ಉಮೇಶ್ ಶೆಟ್ಟಿ ಯವರು ದೀಪ ಬೆಳಗಿಸುವ ಮೂಲಕ ಓಣಂ ಆಚರಣೆಗೆ ಶುಭಹಾರೈಸಿದರು.ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ.ಚೇತನ್ ಶೆಟ್ಟಿ ಕೋವಾಡಿ,ಐಕ್ಯೂಎಸಿ ಘಟಕದ ಸಂಯೋಜಕಿ ಅವಿತಾ ಕೋರೆಯಾ,ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ದೀಪಾ ಹಾಗೂ ಕಾಲೇಜಿನ ಬೋಧಕ ,ಬೋಧಕೇತರ ವ್ರಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೇರಳದ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಹಿನ್ನೆಲೆಗೆ ಬೆಸೆದುಕೊಂಡಿರುವ ಈ ಹಬ್ಬವನ್ನು ನಮ್ಮ ಕರಾವಳಿ ಭಾಗದಲ್ಲಿ ಆಚರಿಸುವುದು ವಿಶೇಷ.










