ಕುಂದಾಪುರ (ಸೆ. 02) : ಕೇರಳದ ಮಲ್ಲಾಪುರಂನಿಂದ ಕಾಶ್ಮೀರದ ತನಕ ಸೈಕಲ್ ಜಾಥಾ ಮೂಲಕ ಮಹಿಳಾ ಸಬಲೀಕರಣದ ಉದ್ದೇಶವನ್ನು ಇಟ್ಟುಕೊಂಡು ಸರಿಸುಮಾರು ಒಂದು ತಿಂಗಳ ಕಾಲಾವಕಾಶದ ಗುರಿಯನ್ನು ಹಾಕಿಕೊಂಡು ಸೈಕಲ್ ಜಾಥಾ ಮೂಲಕ ಹೊರಟ ಕೇರಳದ ವಿದ್ಯಾರ್ಥಿನಿ ತನ್ನ ಮೂವರು ಸಹಪಾಠಿಗಳ ಜೊತೆ ಕುಂದಾಪುರಕ್ಕೆ ತಲುಪಿದಾಗ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ನ ಅಧ್ಯಕ್ಷರಾದ ಲ. ಜಯಶೀಲ ಶೆಟ್ಟಿ ಕಂದಾವರ ಹೂಗುಚ್ಛ ನೀಡಿ ಸ್ವಾಗತಿಸಿ ಬರಮಾಡಿಕೊಂಡರು.
ಆಗ ವಿದ್ಯಾರ್ಥಿನಿ ಮಹಿಳಾ ಸಬಲೀಕರಣದ ಮೂಲ ಉದ್ದೇಶದ ಬಗ್ಗೆ ಮಾತನಾಡಿ, ಮಹಿಳಾ ಸಬಲೀಕರಣ ಮಹಿಳೆಯರಿಂದಲೇ ಸಾಧ್ಯ ಎಂಬುದನ್ನು ಜಗತ್ತಿಗೆ ತೋರ್ಪಡಿಸುವ ಉದ್ದೇಶದಿಂದ ಈ ಜಾಥವನ್ನು ಹಮ್ಮಿಕೊಂಡಿದ್ದೇವೆ. ಹಾಗೇ ನನಗೆ ಬಹುದಿನಗಳ ಕನಸನ್ನು ನನಸು ಮಾಡುವ ಸಂದರ್ಭ ಒದಗಿಬಂದಿದೆ. ನಾವು ಹೊರಟ ಹೆಜ್ಜೆಯಲ್ಲಿ ಏನೇ ಎಡರು-ತೊಡರುಗಳು ಬಂದರೂ ಅದರಲ್ಲಿ ಯಶಸ್ಸನ್ನು ಸಾಧಿಸಿಯೇ ಸಾಧಿಸುತ್ತೇವೆ ಎಂದು ನನ್ನ ಮನದಾಳದ ಮಾತುಗಳನ್ನು ಹೇಳಿದರು.
ವಲಯಾದ್ಯಕ್ಷರಾದ ಲ. ಅಶೋಕ್ ಶೆಟ್ಟಿ ಸಂಸಾಡಿ ಮುಂದಿನ ಪ್ರಯಾಣಕ್ಕೆ ಶುಭ ಹಾರೈಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಲ. ರತ್ನಾಕರ ಶೆಟ್ಟಿ ಕಂದಾವರ ಹಾಗೂ ಪ್ರಧಾನ ಕಾರ್ಯದರ್ಶಿ ಲ. ಗಿರೀಶ್ ಮೇಸ್ತ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಲ. ಅಂಪಾರು ನಿತ್ಯಾನಂದ ಶೆಟ್ಟಿ, ಲ. ಸುಕುಮಾರ ಶೆಟ್ಟಿ, ಲ. ಗಣೇಶ್ ಬೈಂದೂರು, ಲ. ಉದಯ ಶೆಟ್ಟಿ ಮಚಟ್ಟು, ಲ. ಪ್ರಭಾಕರ ಶೆಟ್ಟಿ, ಲ. ಸಮಿವುಲ್ಲ ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು.