ಬೈಂದೂರು (ಸೆ , 9) : ವೀರ ಯೋಧ ಪ್ರಶಾಂತ್ ದೇವಾಡಿಗರ ಮುಂದಾಳತ್ವದ ನೇಶನ್ ಲವರ್ಸ್ ಬೈಂದೂರು ತಂಡ ಯುವಕರಲ್ಲಿ ದೇಶ ಪ್ರೇಮ ಹಾಗೂ ಕ್ರೀಡಾಸಕ್ತಿಯೊಂದಿಗೆ ಸೈನಿಕ ತರಬೇತಿಯಂತಹ ಅರ್ಥಪೂರ್ಣ ಯೋಜನೆಯನ್ನು ಹಾಕಿಕೊಂಡಿದ್ದು ,ಇವರ ಯೋಜನೆಗೆ ಬೆನ್ನೆಲುಬಾಗಿ ನಿಂತ ದೇಶದ ಪ್ರತಿಷ್ಠಿತ ಆಹಾರ ಮತ್ತು ಆತಿಥ್ಯಕ್ಕೆ ಹೆಸರಾದ ಶೆಫ್ ಟಾಕ್ ಸಂಸ್ಥೆಯ ಮುಖ್ಯಸ್ಥರು ಹಾಗೂ ವರಲಕ್ಷೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಸಂಚಾಲಕರಾಗಿರುವ ಗೋವಿಂದ ಬಾಬು ಪೂಜಾರಿಯವರನ್ನು ಗೌರವಾಧ್ಯಕ್ಷರಾಗಿ ಹಾಗೂ ಗೌರವ ಸಲಹೆಗಾರರಾಗಿ ಸಮಾಜ ಸೇವಕ ಪ್ರಸಾದ್ ಬೈಂದೂರ್ ರವರನ್ನು ಸಂಸ್ಥೆ ಆಯ್ಕೆ ಮಾಡಿದೆ.
ಕರಾವಳಿ ಭಾಗದ ಯುವಕರಿಗೆ ಕ್ರೀಡೆಯ ಜೊತೆಗೆ ಸೈನಿಕ ತರಭೇತಿ ನೀಡಿ ಹೆಚ್ಚು ಹೆಚ್ಚು ಯುವಕರನ್ನು ಭಾರತೀಯ ಸೇನೆಗೆ ಸೇರ್ಪಡೆಗೊಳಿಸುವುದು ಸಂಸ್ಥೆಯ ಮೂಲ ಉದ್ದೇಶವಾಗಿರುತ್ತದೆ ಎಂದು ಶ್ರೀ ಗೋವಿಂದ ಬಾಬು ಪೂಜಾರಿ ಹೇಳಿದರು. ಈಗಾಗಲೇ ಸಂಸ್ಥೆ ವತಿಯಿಂದ ಯುವಕರಿಗೆ ಸೈನಿಕ ತರಬೇತಿಯನ್ನು ನೀಡುತ್ತಿರುವ ಯೋಧ ಪ್ರಶಾಂತ್ ದೇವಾಡಿಗರ ಕಾಳಜಿಗೆ ಪ್ರಶಂಸೆ ವ್ಯಕ್ತವಾಗಿದೆ. ನಿವ್ರತ್ತ ಯೋಧ ಗಣಪತಿ ಖಾರ್ವಿ ಉಪ್ಪುಂದ ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಿರಣ್ ದೇವಾಡಿಗರು ಯುವಕರಿಗೆ ತರಬೇತಿಯನ್ನು ನೀಡುತ್ತಿದ್ದಾರೆ.