ಕುಂದಾಪುರ (ಸೆ, 9) : ಮಧ್ಯಪ್ರದೇಶದ ಮೊರೆನಾದ ಶಿವ್ಸ್ ಮ್ಯೂಸಿಕಲ್ ಅಕಾಡೆಮಿ ವತಿಯಿಂದ ನಡೆದ ಆನ್ಲೈನ್ ಕೊಳಲುವಾದನ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಶ್ಯಾಮ್ ಜಿ. ಎನ್. ಪೂಜಾರಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕೊಳಲುವಾದನದಲ್ಲಿ ಅಪಾರ ಆಸಕ್ತಿಯನ್ನು ಹೊಂದಿರುವ ಶ್ಯಾಮ್ ಗಂಗೊಳ್ಳಿಯ ಖ್ಯಾತ ಛಾಯಾಗ್ರಾಹಕ ಗಣೇಶ್ ಪಿ. ಪೂಜಾರಿ ಮತ್ತು ಮಾಲತಿ ದಂಪತಿಯ ಪುತ್ರ.
Day: September 9, 2021
ಹೆಮ್ಮಾಡಿ : ರಿಕ್ಷಾ ನಿಲ್ದಾಣ ಉದ್ಘಾಟಿಸಿ,ಶುಭ ಹಾರೈಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ
ಹೆಮ್ಮಾಡಿ(ಸೆ,7): ಹೆಮ್ಮಾಡಿ ಭಾಗದ ರಿಕ್ಷಾ ಚಾಲಕ ಮಾಲಕರ ಬಹುದಿನದ ಬೇಡಿಕೆಯಾಗಿದ್ದ ರಿಕ್ಷಾ ನಿಲ್ದಾಣವನ್ನು ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗಿದ್ದು,ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು ಉದ್ಘಾಟಿಸಿ ಶುಭಹಾರೈಸಿದರು. ರಿಕ್ಷಾ ಚಾಲಕ- ಮಾಲಕರ ಜನ ಪರ ಕಾಳಜಿಯನ್ನು ಪ್ರಶಂಸಿದ ಶಾಸಕರು ರಿಕ್ಷಾ ನಿಲ್ದಾಣಕ್ಕೆ ಇಂಟರ್ಲಾಕ್ ಅಳವಡಿಸಲು ಒಂದು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು, ಪಕ್ಷದ ಕಾರ್ಯಕರ್ತ ಮತ್ತು ರಿಕ್ಷಾ ಚಾಲಕ & ಮಾಲಕರು ಉಪಸ್ಥಿತರಿದ್ದರು.
ಯುವಕರಲ್ಲಿ ದೇಶಪ್ರೇಮ ಹಾಗೂ ದೇಶ ಸೇವೆಗೆ ಅಣಿಗೊಳಿಸುವುದೇ ನಮ್ಮ ಗುರಿ : ಗೋವಿಂದ ಬಾಬು ಪೂಜಾರಿ
ಬೈಂದೂರು (ಸೆ , 9) : ವೀರ ಯೋಧ ಪ್ರಶಾಂತ್ ದೇವಾಡಿಗರ ಮುಂದಾಳತ್ವದ ನೇಶನ್ ಲವರ್ಸ್ ಬೈಂದೂರು ತಂಡ ಯುವಕರಲ್ಲಿ ದೇಶ ಪ್ರೇಮ ಹಾಗೂ ಕ್ರೀಡಾಸಕ್ತಿಯೊಂದಿಗೆ ಸೈನಿಕ ತರಬೇತಿಯಂತಹ ಅರ್ಥಪೂರ್ಣ ಯೋಜನೆಯನ್ನು ಹಾಕಿಕೊಂಡಿದ್ದು ,ಇವರ ಯೋಜನೆಗೆ ಬೆನ್ನೆಲುಬಾಗಿ ನಿಂತ ದೇಶದ ಪ್ರತಿಷ್ಠಿತ ಆಹಾರ ಮತ್ತು ಆತಿಥ್ಯಕ್ಕೆ ಹೆಸರಾದ ಶೆಫ್ ಟಾಕ್ ಸಂಸ್ಥೆಯ ಮುಖ್ಯಸ್ಥರು ಹಾಗೂ ವರಲಕ್ಷೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಸಂಚಾಲಕರಾಗಿರುವ ಗೋವಿಂದ ಬಾಬು ಪೂಜಾರಿಯವರನ್ನು ಗೌರವಾಧ್ಯಕ್ಷರಾಗಿ ಹಾಗೂ […]
ಜಿಲ್ಲಾ ವಿಕಲಚೇತನರ ಇಲಾಖೆ ಹಾಗೂ ಎಪಿಡಿ ವತಿಯಿಂದ ವಿವಿಧ ಕಾರ್ಯಕ್ರಮ
ಬೈಂದೂರು (ಸೆ, 9): ಜಿಲ್ಲಾ ವಿಕಲಚೇತನರ ಇಲಾಖೆ ಹಾಗೂ ಎಪಿಡಿ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಕುಂದಾಪುರ ತಾಲೂಕು ಹಾಗೂ ಬೈಂದೂರು ತಾಲೂಕಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಹಾಗೂ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ತಿಂಗಳ ಸಮುದಾಯಾಧಾರಿತ ಔದ್ಯೋಗಿಕ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಸಪ್ಟೆಂಬರ್,9 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. […]










