ಮಲ್ಪೆ (ಸೆ,12): ತನ್ನ ಕೌಟುಂಬಿಕ ಸವಾಲುಗಳ ನಡುವೆಯೂ ಇನ್ನೊಬ್ಬರ ಸಹಾಯಕ್ಕೆ ಸದಾ ಸಿದ್ದರಾಗುವ, ಜೊತೆಗೆ ಅದೆಷ್ಟೋ ಜನರಿಗೆ ಆಪತ್ ಕಾಲದಲ್ಲಿ ಸಹಾಯಹಸ್ತ ಚಾಚಿರುವ ಈಶ್ವರ ಮಲ್ಪೆಯವರ ಕೌಟುಂಬಿಕ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಉಡುಪಿಯ ಸಹೃದಯಿ ಯುವಕರಾದ ಸ್ಯಾನ್ಫೋರ್ಡ್ ಡಿ’ಸೋಜಾ,ಸತ್ಯ ಆಚಾರ್ಯ,ನವೀನ್ ಸಾಲಿಯಾನ್,ಮಿಥುನ್ ಪೂಜಾರಿಯವರ ತಂಡ ಈಶ್ವರ್ ಮಲ್ಪೆ ಯವರ ಮನೆಗೆ ಭೇಟಿ ನೀಡಿ ಇವರ 2 ವಿಕಲ ಚೇತನ ಮಕ್ಕಳ ಚಿಕಿತ್ಸೆಗಾಗಿ 25000 ರೂ, ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಈ ಯುವಕರ ತಂಡದ ಸಹಾಯಕ್ಕೆ ಈಶ್ವರ ಮಲ್ಪೆಯವರು ಕ್ರತಜ್ಞತೆಯನ್ನು ವ್ಯಕ್ತಪಡಿಸಿದ್ದು ,
ಭಗವಂತನು ಈ ಯುವಕರಿಗೆ ದೇವರು ಸಕಲ ಸಂಪತ್ತು ಅರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಕೋರಿಕೊಂಡಿದ್ದಾರೆ.












