ಕುಂದಾಪುರ(ಸೆ,19): ಇಲ್ಲಿನ ಕುಂದೇಶ್ವರ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್(ಸ್ಪೇಸ್) ಸಿಎ/ಸಿಎಸ್/ಸಿಎಮ್ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿನಿ ವೈಷ್ಣವಿ ಅವರು 543 ಅಂಕ ಗಳಿಸುವುದರೊಂದಿಗೆ ಅಖಿಲ ಭಾರತಕ್ಕೆ 29ನೇರ್ಯಾಂಕ್ ಗಳಿಸಿದ್ದಾರೆ. ಹಾಗೆಯೇ ಸಂಸ್ಥೆಯ ವಿದ್ಯಾರ್ಥಿಗಳಾದ ರಕ್ಷಿತ್ ಶೆಟ್ಟಿ 246, ಸಿಂಚನ ಶೆಟ್ಟಿ 239, ಸುದರ್ಶನ್ ಅಡಿಗ 232, ಸುಚಿನ್ ಕುಮಾರ್ ಶೆಟ್ಟಿ 228, ಗಣೇಶ್ ಮಧ್ಯಸ್ಥ 213, ಅಖಿಲ ಹೆಬ್ಬಾರ್210, ಸಹನಾ 206, ಆಯೆಷ ತುಬಾ 203, ಭೂಮಿಕ 202, ಮೈತ್ರಿ 201 ಹೊಸ ಪಠ್ಯಕ್ರಮದ ಇಂಟರ್ಮೀಡಿಯೇಟ್ ಪರೀಕ್ಷೆ ಯಲ್ಲಿ ಉತ್ತೀರ್ಣರಾದರೆ, ರಕ್ಷಿತ್ ಶೆಟ್ಟಿ 246, ರೋಹನ್ 178, ಮೇಘರಾಜ್ 150, ಹಳೆ ಪಠ್ಯಕ್ರಮದ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಸಂಸ್ಥೆಯ ವಿದ್ಯಾರ್ಥಿಗಳು ಈಗಾಗಲೇ ಅಖಿಲ ಭಾರತ ಮಟ್ಟದಲ್ಲಿ ಫೌಂಡೇಶನ್ ಪರೀಕ್ಷೆ ಇಂಟರ್ಮೀಡಿಯೇಟ್ ಪರೀಕ್ಷೆ ಮತ್ತು ಫೈನಲ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದು ಪ್ರೊಫೆಷನಲ್ ಕೋರ್ಸ್ಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿರುವ ಶಿಕ್ಷ ಪ್ರಭ ಸಂಸ್ಥೆಯ ಸಾಧನೆಗೆ ಉತ್ತಮ ಬೋಧಕ ಸಿಬ್ಬಂದಿಗಳು ಸಂಸ್ಥೆಯ ಆಧುನಿಕ ಶಿಕ್ಷಣ ಪದ್ಧತಿಯ ಜೊತೆಗೆ ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಕಾರಣ ಎಂದು ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್ ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
”ರ್ಯಾಂಕ್ ಪಡೆಯುವ ಉದ್ದೇಶದಿಂದ ಪರಿಶ್ರಮ ಹಾಕಲಿಲ್ಲ,ಇದು ನನ್ನ ಶಿಕ್ಷ ಪ್ರಭ ಅಕಾಡೆಮಿಯ ಬೋಧಕರ ನೆರವಿನ ಜೊತೆಗೆ ಕಳೆದ ಕೆಲವು ತಿಂಗಳಿಂದ ನಡೆಸಿದ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತ ನನ್ನ ಪೋಷಕರು ಮತ್ತು ಶಿಕ್ಷಕರು ಮತ್ತು ಎಲ್ಲಾ ಬೋಧಕ ಸಿಬ್ಬಂದಿಗಳಿಗೆ ಧನ್ಯವಾದಗಳು.”
ವೈಷ್ಣವಿ ಎಮ್ ವಿ
ಅಖಿಲ ಭಾರತ 29ನೇ ರ್ಯಾಂಕ್
ಇಂಟರ್ಮೀಡಿಯೇಟ್