ಪಣಜಿ(ಸೆ,27): ಗೋವಾದ ಪಣಜಿಯಲ್ಲಿ ನಡೆದ ರಾಷ್ಟ್ರೀಯ ಥಾಯ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಮೊದಲ ಬಾರಿಗೆ ಅಮೆಚೂರು ವಿಭಾಗದಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ವೃತ್ತಿಪರ ಕಿಕ್ ಬಾಕ್ಸರ್ ಕುಂದಾಪುರ ಮೂಲದ ಅನೀಶ್ ಶೆಟ್ಟಿ ಬೆಳ್ಳಿಯ ಪದಕ ಪಡೆದಿದ್ದಾರೆ.
ವೃತ್ತಿಪರ ಸ್ಪರ್ಧೆಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲು ಗೋವಾದಲ್ಲಿ ತರಬೇತಿ ಪಡೆಯುತ್ತಿರುವ ಅನೀಶ್, ಅಲ್ಲಿಯ ಟ್ರೈಬಲ್ ವಾರಿಯರ್ಸ್ ಗೋವಾ (TWG) ತಂಡವನ್ನು ಪ್ರತಿನಿಧಿಸಿರುತ್ತಾರೆ.ನಾಲ್ಕು ಸುತ್ತಿನ ಹೋರಾಟದಲ್ಲಿ ಅನೀಶ್ ಒಡಿಶಾದ ಸ್ಪರ್ಧಿಯ ವಿರುದ್ಧದ ಅಂತಿಮ ಸುತ್ತಿನಲ್ಲಿ ಪರಾಜಯ ಅನುಭವಿಸಿದರು.
ಕೊರೋನಾ ಬಿಕ್ಕಟ್ಟಿನಿಂದಾಗಿ ಪ್ರೊಫೆಷನಲ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ನನಗೆ ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಅವಕಾಶ ಲಭ್ಯವಾಗುತ್ತಿಲ್ಲ.ಥಾಯ್ಲೆಂಡ್ ಸೇರಿದಂತೆ ವಿವಿಧ ದೇಶಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.ಹಾಗಾಗಿ ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಹೋರಾಟದ ಛಲ ಮುಂದುವರಿಸಲು ಇಂಥ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆನೆ.
ವೃತ್ತಿಪರ ಹೋರಾಟಗಳಲ್ಲಿ ಪಾಲ್ಗೊಳ್ಳುವಾಗ ಇರುವ ಮುಕ್ತತೆ ಇಲ್ಲಿರುವುದಿಲ್ಲ. ಗಾರ್ಡ್ ಹಾಕಿಕೊಂಡು ಸ್ಪರ್ಧೆ ನಡೆಸಬೇಕು. ಪ್ರೋ ವಿಭಾಗದಲ್ಲಿ ಯಾವುದೇ ಗಾರ್ಡ್ ಇರುವುದಿಲ್ಲ. ಮೊದಲ ಅಮೆಚೂರ್ ಸ್ಪರ್ಧೆಯಲ್ಲಿ ಬೆಳ್ಳಿಗೆದ್ದ ತೃಪ್ತಿ ನನಗಿದೆ ಎಂದು ಅನಿಶ್ ಶೆಟ್ಟಿ ತಿಳಿಸಿದ್ದಾರೆ.