ಉಪ್ಪುಂದ(ಅ,19): ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಸಂಕದ ಬಾಗಿಲು ದಿ.ಗೋವಿಂದ ಖಾರ್ವಿಯವರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ ಅಕ್ಟೋಬರ್ 17 ರ ಭಾನುವಾರದಂದು ನಡೆಯಿತು.
“ಸ್ವರಾಜ್ಯ ೭೫” ರ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ನಾಮಫಲಕ ಅಳವಡಿಕೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಸಾಹಿತಿಗಳಾದ ಉಪ್ಪುಂದ ಶ್ರೀ ರಮೇಶ್ ವೈದ್ಯರವರು ನಾಮಫಲಕ ಅನಾವರಣ ಮಾಡಿ ದಿ.ಗೋವಿಂದ ಖಾವಿ೯ಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಖಾರ್ವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉದ್ಯಮಿ ಶ್ರೀ ಶರತ್ ಶೆಟ್ಟಿ ಉಪ್ಪುಂದ, ಶಿಕ್ಷಕ ಶ್ರೀ ರವೀಂದ್ರ ಹೆಚ್ “ಸ್ವರಾಜ್ಯ ೭೫” ಕಾಯ೯ಕ್ರಮದ ಸಂಚಾಲಕರು ಶ್ರೀ ಪ್ರದೀಪ ಕುಮಾರ ಬಸ್ರೂರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ, ನಿವೃತ್ತ ಸೈನಿಕರು ಬೈಂದೂರು ಶ್ರೀ ಚಂದ್ರಶೇಖರ ನಾವುಡರು “ಭಾರತ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ ಮತ್ತು ಉಪ್ಪುಂದ ಗೋವಿಂದ ಖಾವಿ೯ ಇವರ ಸೇವೆ” ಎನ್ನುವ ವಿಚಾರವನ್ನುಈ ಬಗ್ಗೆ ಮಾತನಾಡಿದರು.
ಜನ ಸೇವಾ ಟ್ರಸ್ಟ್ (ರಿ) ಮೂಡುಗಿಳಿಯಾರು ಹಾಗೂ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಸಹಕರಿಸಿದ್ದರು ಶಿಕ್ಷಕ ಶ್ರೀ ರವೀಂದ್ರ ಹೆಚ್. ಸಿ ಕಾರ್ಯಕ್ರಮ ನಿರೂಪಿಸಿದರು . ತಾ . ಪಂ ಮಾಜಿ ಸದಸ್ಯ ಪ್ರಸನ್ನ ಖಾವಿ೯ ವಂದಿಸಿದರು.
.