ಕುಂದಾಪುರ (ಅ,23): ಬಾಂಗ್ಲಾದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂದೂ ವಿರೋಧಿ ಚಟುವಟಿಕೆಗಳಾದ ಮಂದಿರಗಳ ದ್ವಂಸ ಕೃತ್ಯ ಗಳು, ಹದಿಹರೆಯದ ಹೆಣ್ಣುಮಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರಗಳು, 38ಕ್ಕೂ ಅಧಿಕ ಹಿಂದೂ ಮನೆಗಳನ್ನ ಬೆಂಕಿಗೆ ಆಹುತಿ ಮಾಡಿ 100ಕ್ಕೂ ಅಧಿಕ ಮನೆಗಳನ್ನ ಧ್ವಂಸ ಮಾಡಿರುವಂತಹ ಹೇಯ ಕೃತ್ಯವನ್ನ ಖಂಡಿಸಿ ಅ,23 ಶನಿವಾರ ಸಂಜೆ 7:30ರಿಂದ ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ಯುವಾ ಬ್ರಿಗೇಡ್ ಕುಂದಾಪುರದ ವತಿಯಿಂದ ಪಂಜಿನ ಮೆರವಣಿಗೆ ನಡೆಯಿತು.
ಶಂಕರ್ ಅಂಕದ ಕಟ್ಟೆಯವರು, ಬಾಂಗ್ಲಾದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂದೂ ವಿರೋಧಿ ಚಟುವಟಿಕೆಗಳನ್ನು ವಿರೋಧಿಸಿ, ನಾವು ನಿಮಗೆ ಕೊಟ್ಟ ಭಿಕ್ಷೆ ಹೆಚ್ಚಾಗಿದೆ ಎಂದು ಉದ್ಗರಿಸಿದರು.
ಈ ಸಂಧರ್ಭದಲ್ಲಿ ಯುವಾ ಬ್ರಿಗೇಡ್ ನ ರಾಜ್ಯ ಧರ್ಮ ಜಾಗ್ರತಿಯ ಸಂಚಾಲಕರಾದ ನಿರಂಜನ್ ತಲ್ಲೂರು, ಪುರಸಭಾ ಸದಸ್ಯರಾದ ಪ್ರಭಾಕರ್ , ಸಂತೋಷ್ ಶೆಟ್ಟಿ, ಬಜರಂಗ ದಳದ ಮುಖಂಡ ಗಿರೀಶ್ ಕುಂದಾಪುರ,ಶೇಖರ್ ಪೂಜಾರಿ, ರತ್ನಾಕರ್ ಕುಂದಾಪುರ, ಕರಣ್ ಉಪ್ಪಿನಕುದ್ರು, ಸುನಿಲ್ ಕುಮಾರ್,ಸುರೇಂದ್ರ ಸಂಗಮ್,ಸತೀಶ್ ಶೆಟ್ಟಿ, ರಾಜೇಶ್ ಕಡಿಗೆ, ಪ್ರದೀಪ್ ಬಸ್ರೂರು, ಸತೀಶ್ ಗುಂಡ್ಮಿ, ಸತೀಶ್ ಶಂಕರನಾರಾಯಣ, ಕುಂದಾಪುರದ ಯುವಾ ಬ್ರಿಗೇಡ್ ಸಂಚಾಲಕರಾದ ಪ್ರಮೋದ್ ಶಂಕರನಾರಾಯಣ, ಕಿರಣ್ ಉಳ್ಳೂರು ಉಪಸ್ಥಿತರಿದ್ದರು.