ಹೈಕಾಡಿ(ಜು,3): ಸ್ಮಾರ್ಟ್ ಕ್ರಿಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್(ರಿ.),ಸದ್ಗುರು ಕುಟೀರ ಹೈಕಾಡಿ ಇವರು ಆಯೋಜಿಸಿರುವ ಯಕ್ಷಗಾನ ಹೆಜ್ಜೆ ಕುಣಿತ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಬಾಡಿ ಮೂರುಕೈಯಲ್ಲಿ ಇತ್ತೀಚೆಗೆ ನಡೆಯಿತು.
ಬೆಳ್ವೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಕರುಣಾಕರ ಶೆಟ್ಟಿ ಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಮ್ಮ ಸಂಸ್ಥೆಯ ವಿದ್ಯಾರ್ಥಿ ಗಳ ಜೊತೆಗೆ ಸುತ್ತಮುತ್ತಲಿನ ಯಕ್ಷಗಾನದ ಆಸಕ್ತಿಯಿರುವ ಮಕ್ಕಳಿಗೆ ಸುಲಭವಾಗಿ ದೊರಕುವಂತೆ ಯಕ್ಷಗಾನ ಕಲೆ ಉಳಿಸಿ ಬೆಳಸಬೇಕು ಎನ್ನುವ ಉದ್ದೇಶವನ್ನು ಸ್ಮಾರ್ಟ್ ಕ್ರಿಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ (ರಿ) ಹೊಂದಿದೆ ಎಂದು ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಹೆರಿಯಣ್ಣ ನಾಯ್ಕ ಹೇಳಿದರು.
ಸ್ಮಾರ್ಟ್ ಕ್ರಿಯೇಶನ್ ಎಜ್ಯುಕೇಶನ್ ಟ್ರಸ್ಟ್(ರಿ.),ನ ಅಧ್ಯಕ್ಷರಾದ ಶ್ರೀ ಕೃಷ್ಣ ಮೂರ್ತಿ ಹೈಕಾಡಿಯವರು ಮಾತನಾಡಿ ಶೈಕ್ಷಣಿಕವಾಗಿ ಗ್ರಾಮೀಣ ಪ್ರದೇಶದಲ್ಲಿ ಹಲವಾರು ತರಬೇತಿ ಚಟುವಟಿಕೆಗಳನ್ನು ಮಾಡುವುದು ಟ್ರಸ್ಟ್ ನ ಉದ್ದೇಶವಾಗಿದೆ.ಸಮಾಜದ ಎಲ್ಲಾ ಕ್ಷೇತ್ರದಲ್ಲಿ ನಮ್ಮ ಟ್ರಸ್ಟ್ ಸಮಾಜ ಉಪಯುಕ್ತ ಕಾರ್ಯಕ್ರಮ ವನ್ನು ಮಾಡಲು ನಿರ್ಧರಿಸಿದೆ ಎಂದರು .
ಯಕ್ಷಗಾನ ಹೆಜ್ಜೆ ತರಬೇತುದಾರರಾದಶ್ರೀ ನವೀನ್ ಕೋಟ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಬಾಡಿ ಮೂರುಕೈ ಇದರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಪ್ರವೀಣ್ ಪೂಜಾರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಬಾಡಿ ಮೂರುಕೈ ಇದರ ಉಪಾಧ್ಯಕ್ಷೆಶ್ರೀಮತಿ ಪಾರ್ವತಿ, ಹ.ವಿ.ಸಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಬಾಡಿ ಮೂರುಕೈ ಇದರ ಅಧ್ಯಕ್ಷರಾದ ಶ್ರೀ ಅನ್ವರ್ ಹುಸೇನ್, ಸಂಸ್ಥೆಯ ಹಳೆ ವಿದ್ಯಾರ್ಥಿ ಶ್ರೀ ದಿನಕರ ಶೆಟ್ಟಿ ,ಶಿಕ್ಷಕಿ ಶ್ರೀಶೈಲ ಉಪಸ್ಥಿತರಿದ್ದರು .ಅಮೃತ ಭಾರತಿ ವಿದ್ಯಾಲಯ ಹೆಬ್ರಿ ಪ್ರೌಢಶಾಲಾ ವಿಭಾಗದ ಉಪಮುಖ್ಯೋಪಾಧ್ಯಾಯರು ಹಾಗೂ ಸ್ಮಾರ್ಟ್ ಕ್ರಿಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್(ರಿ) ನ ಕಾರ್ಯದರ್ಶಿ ಶ್ರೀ ಮಹೇಶ ಹೈಕಾಡಿ ವಂದಿಸಿದರು.ಶ್ರೀಮತಿ ಸರಸ್ವತಿ ಸಹಶಿಕ್ಷಕಿ ನಿರೂಪಿಸಿದರು,ಸುಮಾರು 40 ವಿದ್ಯಾರ್ಥಿಗಳು ತರಬೇತಿ ಗೆ ಹಾಜರಿದ್ದರು.
ಪ್ರತಿ ಶನಿವಾರ 2 ಗಂಟೆಯಿಂದ 4 ಗಂಟೆಯ ವರೆಗೆ ತರಬೇತಿ ನಡೆಯಲಿದ್ದು,ಆಸಕ್ತರು ಜುಲೈ 8 ರ ಒಳಗೆ 9743682692 ಸಂಖ್ಯೆಗೆ ಹೆಸರು ನೊಂದಾಯಿಸಲು ಟ್ರಸ್ಟ್ ತಿಳಿಸಿದೆ.