ತಲ್ಲೂರು(ನ,16): ಪ್ರತಿಷ್ಠಿತ ಇನ್ಪೋಸಿಸ್ ಫೌಂಡೇಶನ್ ಸಹಯೋಗದೊಂದಿಗೆ ಯುವಾ ಬ್ರಿಗೇಡ್ ನ ಬೃಹತ್ ಯೋಜನೆಯಾದ ಕೈ ಹಿಡಿದು ನಡೆಸೆನ್ನನು ಎನ್ನುವ ಯೋಜನೆಯಡಿ ರಾಜ್ಯದ 50 ಆಯ್ದ ಸರಕಾರಿ ಶಾಲೆಯ ಮಕ್ಕಳಿಗೆ ಕನ್ನಡದಲ್ಲೇ ಗ್ರಹಿಕೆ ಆಧಾರಿತ ಶಿಕ್ಷಣ ನೀಡುವ ಸಲುವಾಗಿ ಟ್ಯಾಬ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಆ ಪ್ರಯುಕ್ತ ಯುವಾ ಬ್ರಿಗೇಡ್ ಕುಂದಾಪುರದ ವತಿಯಿಂದ ಕುಂದಾಪುರ ತಾಲ್ಲೂಕಿನ ತಲ್ಲೂರು ಸರಕಾರಿ ಪ್ರೌಢ ಶಾಲೆಯ 30 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಮ್. ಮುಂದಿನಮನಿ, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಶಾಲಾ ಅಧ್ಯಾಪಕ ವೃಂದದವರು ಹಾಗೂ ಯುವಾಬ್ರಿಗೇಡ್ ನ ರಾಜ್ಯ ಧರ್ಮಜಾಗ್ರತಿ ಸಂಚಾಲಕರಾದ ನಿರಂಜನ್ ತಲ್ಲೂರು, ವಿನೋದ್ ಕುಂದಾಪುರ,ಯುವಾಬ್ರಿಗೇಡ್ ನ ಕುಂದಾಪುರ ತಾಲೂಕು ಸಂಚಾಲಕ ಪ್ರಮೋದ್ ಶಂಕರನಾರಾಯಣ ಉಪಸ್ಥಿತರಿದ್ದರು.