ಕುಂದಾಪುರ (ಡಿ,1): ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ,ಶಿವಪ್ಪನಾಯಕ ಅರಮನೆ ಶಿವಮೊಗ್ಗ ಇದರ ಸಹಾಯಕ ನಿರ್ದೇಶಕರು ಹಾಗೂ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಧಾರವಾಡ ಇದರ ಉಪನಿರ್ದೇಶಕ(ಪ್ರಭಾರ)ರಾಗಿರುವ ಶ್ರೀ ಶೇಜೇಶ್ವರವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.

ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ.ಹನುಮನಾಯಕ ಇವರ ಮಾರ್ಗದರ್ಶನದಲ್ಲಿ “ಚಿತ್ರದುರ್ಗ ಜಿಲ್ಲೆಯ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಭೂಗೋಳ ; ಒಂದು ಅಧ್ಯಯನ(ಪೂರ್ವ ಇತಿಹಾಸದ ಕಾಲದಿಂದ ಕ್ರಿ.ಶ 18ನೇ ಶತಮಾನದವರೆಗೆ)” ಎಂಬ ವಿಷಯದ ಕುರಿತು ಸಾದರಪಡಿಸಿದ ಪಿಎಚ್.ಡಿ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.
ಇವರು ಚಿತ್ರದುರ್ಗ ಜಿಲ್ಲೆ,ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದ ಶ್ರೀ ರುದ್ರಪ್ಪ ಹಾಗೂ ಶ್ರೀಮತಿ ಓಂಕಾರಮ್ಮ ವರ ಮಗ.











