ತ್ರಾಸಿ( ಡಿ.21) : ತ್ರಾಸಿ ಗ್ರಾಮದ ನಿವಾಸಿಯಾಗಿರುವ ಕೋದಂಡರಾಮರವರ ಮಗಳಾದ ಸೋನಿ ಶೆಟ್ಟಿಗಾರ್ (ಹತ್ತು ವರುಷ) ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದು , ಮೆದುಳಿನ ಗಡ್ಡೆ (ಬ್ರೈನ್ ಟ್ಯೂಮರ್)ಯ ಖಾಯಿಲೆಗೆ ಒಳಗಾಗಿದ್ದು ಹಲವು ದಾನಿಗಳ ಸಹಕಾರದೊಂದಿಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿತ್ತು. ಆ ಬಳಿಕ ಸತತವಾಗಿ ಆಕೆಗೆ ಔಷಧೋಪಚಾರ ನಡೆಯುತ್ತಿದೆ. ಇದೀಗ ಆಕೆಯ ದೇಹದಲ್ಲಿ ನರಗಳಿಗೆ ಸಂಬಂದಿಸಿದ ದ ಹಾರ್ಮೊನುಗಳ ಬೆಳವಣಿಗೆಯು ಸೂಕ್ತವಾಗಿ ಆಗದಿರುವುದರಿಂದ ಆಕೆಯ ಆರೋಗ್ಯದ ಸುಧಾರಣೆಗಾಗಿ ಮುಂದಿನ ಮೂರು ವರುಷಗಳ ಕಾಲ ನಿತ್ಯವೂ ದುಬಾರಿ ಬೆಲೆಯ ಲಸಿಕೆಯನ್ನು ನೀಡಲೇಬೇಕೆಂದು ಮಣಿಪಾಲ ಕೆ.ಎಮ್.ಸಿ ಮತ್ತು ಆದರ್ಶ ಆಸ್ಪತ್ರೆ ಉಡುಪಿಯ ವೈದ್ಯರು ಸೂಚಿಸಿರುತ್ತಾರೆ. ಅದರ ಕನಿಷ್ಠ ವಚ್ಚ ತಿಂಗಳಿಗೆ ಸುಮಾರು 28000 ರೂಪಾಯಿಗಳಾಗುತ್ತದೆ.
ಸೋನಿ ಶೆಟ್ಟಿಗಾರ್ ತಂದೆ ಕೋದಂಡರಾಮ ಸೆಂಟ್ರಿoಗ್ ಕೆಲಸವನ್ನು ಮಾಡಿಕೊಂಡಿದ್ದು, ಪ್ರಸ್ತುತ ಮಗಳ ಅನಾರೋಗ್ಯದ ಪರಿಸ್ಥಿತಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವುದು ಅಸಾಧ್ಯವಾಗಿದ್ದು ,ಬೇರೆ ಯಾವುದೇ ರೀತಿಯ ಆದಾಯ ಮೂಲಗಳು ಇವರಿಗೆ ಇರುವುದಿಲ್ಲ. ಆದುದುರಿಂದ ಮಗಳ ವೈದ್ಯಕೀಯ ಚಿಕಿತ್ಸೆಗೆ ತಮ್ಮಿಂದ ಸಾಧ್ಯವಾದಷ್ಟು ಧನಸಹಾಯವನ್ನು (ಅಥವಾ ನಿರ್ದಿಷ್ಠ ಲಸಿಕೆಯನ್ನು ನೇರವಾಗಿ ಖರೀದಿಸಿ)ನೀಡುವುದರ ಮೂಲಕ ಮಗಳು ಕೂಡ ಎಲ್ಲಾ ಮಕ್ಕಳಂತೆ ಸುಂದರವಾದ ಬದುಕನ್ನು ಬದುಕಲು ನೀವು ತುಂಬು ಮನಸಿನಿಂದ ಸಹಕರಿಸಿಬೇಕಾಗಿ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ .
ಗೂಗಲ್ ಪೇ ನಂಬರ್ : 7026998578 ( ಕೋದಂಡರಾಮ) ಮಗಳ ಬ್ಯಾಂಕ್ ಅಕೌಂಟ್ ವಿವರ :
NAME : SONY SHETTIGAR
ACCOUNT No : 02802210006673
CANARA BANK. GUJJADI.
IFSC : CNRB0010280
ಬ್ಯಾಂಕ್ ಅಕೌಂಟ್ ವಿವರ :
NAME : KODANDARAMA SHETTIGAR
BANK : KARNATAKA BANK .TRASI
ACCOUNT NO. _ 7552500100495401
IFSC : KARB0000755