ಶಂಕರನಾರಾಯಣ (ಜ.22): ಬೈಂದೂರು ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿಯವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಹಲವಷ್ಟು ದಿನಗಳಿಂದ ಕಂಡು ಬರುತ್ತಿದ್ದು, ಅವಾಚ್ಯ ಪದಬಳಕೆ ಮಾಡಿದ ಉದಯ ಬಿಜೂರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ತಕ್ಷಣಕ್ಕೆ ಆತನನ್ನು ಬಂಧಿಸಬೇಕು, ಇಲ್ಲದಿದ್ದಲ್ಲಿ ಎಲ್ಲಾ ಬಿಜೆಪಿ ಕಾರ್ಯಕರ್ತರು ಮತ್ತು ಶಾಸಕರ ಅಭಿಮಾನಿಗಳು ಠಾಣೆಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಬೈಂದೂರು ಬಿಜೆಪಿಯ ಯುವ ನಾಯಕ ಕಲ್ಗದ್ದೆ ಉಮೇಶ್ ಶೆಟ್ಟಿಯವರು ಆಗ್ರಹಿಸಿದ್ದಾರೆ.