ಹೃದಯವು ಬಲೂನಲ್ಲ ….ಆದರೂ ಗಾಳಿ ತುಂಬಿಸಿಕೊಳ್ಳುತ್ತೆ
ರಕ್ತವು ನೀರಲ್ಲ …ಆದರೂ ದೇಹದೊಳಗೆ ಹರಿಯುತ್ತಿರುತ್ತೆ
ಹೊಟ್ಟೆಯು ಚೀಲವಲ್ಲ…ಆದರೂ ಆಹಾರ ತುಂಬಿಸಿಕೊಳ್ಳುತ್ತೆ
ಕೈಕಾಲುಗಳು ಯಂತ್ರವಲ್ಲ…ಆದರೂ ಪ್ರತಿಕ್ಷಣವೂ ಚಲನೆಯಲ್ಲಿರುತ್ತೆ
ಎಲುಬುಗಳು ಕಬ್ಬಿಣವಲ್ಲ …ಆದರೂ ದೇಹಕ್ಕೆ ರಕ್ಷಣೆ ನೀಡುತ್ತೆ
ಕೈ-ಬೆರಳುಗಳು ಅಳತೆಯ ಕೋಲಲ್ಲ…ಆದರೂ ಅಳತೆಗೆ ಉಪಯೋಗವಾಗುತ್ತೆ
ಚರ್ಮ ಕಂಬಳಿಯಲ್ಲ…..ಆದರೂ ಬಿಸಿಲು ಮಳೆ ಚಳಿಗೆ ಕವಚವಾಗುತ್ತೆ
ಕಣ್ಗಳೆರಡು ಸಮುದ್ರವಲ್ಲ….ಆದರೂ ದುಃಖದಿ ಉಕ್ಕಿ ಹರಿಯುತ್ತೆ
ಮೆದುಳು ಸಾಧನವಲ್ಲ… ಆದರೂ ದೇಹದಾಂಗವ ಶೋಧಿಸುತ್ತಿರುತ್ತೆ…
ಕವನ : ಜಗದೀಶ್ ಮೇಲ್ಮನೆ ಉಪ್ಪುಂದ