ವಂಡ್ಸೆ( ಮಾ.14): ಕುಂದಾಪುರ ತಾಲೂಕಿನ ಕಟ್ ಬೇಲ್ತೂರು ಗ್ರಾಮದ ನಿವಾಸಿಗಳಾದ ಶ್ರೀಮತಿ ಶ್ಯಾಮಲಾ ಮತ್ತು ಚರಣ್ ರವರ ಮಗನಾದ ಮಾಸ್ಟರ್ ಪವನ್ ಕುಮಾರ್ (ವಯಸ್ಸು 4 ವರ್ಷ) ಈ ಮಗು ತಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದು ,ಬಾಲಕನ ಈ ಕಾಯಿಲೆಗೆ ತುರ್ತುಚಿಕಿತ್ಸೆಯ ಅಗತ್ಯವಿದ್ದು ಸುಮಾರು ರೂ. 40 ಲಕ್ಷದಷ್ಟು ಹಣ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿರುತ್ತಾರೆ.
ಈ ನಿಟ್ಟಿನಲ್ಲಿ ನೆಂಪು ಫ್ರೆಂಡ್ಸ್ ಹಾಗೂ ನೆಂಪು ಪ್ರೀಮಿಯರ್ ಲೀಗ್ (NPL) ಇವರ ಸಹಾಯ ಹಸ್ತದಿಂದ ಸುಮಾರು ₹ 70,000 ಹಣವನ್ನು ಸಂಗ್ರಹಿಸಿ ಬಾಲಕನ ಚಿಕಿತ್ಸೆಗೆ ನೀಡಲಾಗಿದ್ದು , ನೆಂಪು ಫ್ರೆಂಡ್ಸ್ ನ ಪದಾಧಿಕಾರಿಗಳು ಬಾಲಕಮ ಮನೆಗೆ ಭೇಟಿ ನೀಡಿ ಹಣವನ್ನು ಮಗುವಿಗೆ ಹಸ್ತಾಂತರಿಸಿ ಇನ್ನೂ ಹೆಚ್ಚಿನ ಸಹಾಯದ ಭರವಸೆಯನ್ನು ನೀಡಿರುತ್ತಾರೆ.
ನೆಂಪು ಫ್ರೆಂಡ್ಸ್ ರವರ ಈ ಮಾನವೀಯ ನೆಲೆಯ ಸಹಾಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.ಈ ಮಗುವಿಗೆ ಸಹಾಯ ಮಾಡಲು ಇಚ್ಛಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಅಥವಾ ಗೂಗಲ್ ಪೇ ಮತ್ತು ಫೋನ್ ಪೇ ಮುಖಾಂತರ ಹಣವನ್ನು ಜಮಾ ಮಾಡಬಹುದು ಎಂದು ತಿಳಿಸಲಾಗಿದೆ.
ಹೆಸರು: ಶ್ಯಾಮಲ
A/c no. : 01132200103442
Branch: Canara Bank (Kundapura)
IFSC Code: CNRB0010113
Phone Pay / Google Pay
9481546533