ಕುಂದಾಪುರ (ಮಾ.24):ಇಲ್ಲಿನ ಡಾ|ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಂಘ, ವಾಣಿಜ್ಯ ಸಂಘ ಹಾಗೂ ರೋಟರ್ಯಾಕ್ಟ್ ಕ್ಲಬ್ ನ ವಿದ್ಯಾರ್ಥಿಗಳು ಕೋಟೇಶ್ವರದ ಶ್ರೀ ಗಣೇಶ್ ಕಲ್ಪತರು ಇಂಡಸ್ಟ್ರೀಸ್ ಗೆ ಕೌಶಲ್ಯ ಆಭಿವ್ರದ್ಧಿ ಹಾಗೂ ತರಬೇತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾ.24 ರಂದು ಭೇಟಿ ನೀಡಿದರು.
ಈ ಸಂಧರ್ಭದಲ್ಲಿ ಶ್ರೀ ಗಣೇಶ್ ಕಲ್ಪತರು ಇಂಡಸ್ಟ್ರೀಸ್ ನ ಮಾಲಕರಾದ ಶ್ರೀ ಚಂದ್ರಶೇಖರ್ ಹಾಗೂ ಸಾತ್ವಿಕ್ ರವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಧಾಕರ ಪಾರಂಪಳ್ಳಿ ,ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಾ ರೈ ,ರೋಟರ್ಯಾಕ್ಟ್ ಕ್ಲಬ್ ಇದರ ಸಂಯೋಕರಾದ ಜ್ಯೋತಿ ಮೊಗವೀರ, ರೇವತಿ ಹಾಗೂ ಸ್ವಸ್ತಿ ಉಪಸ್ಥಿತರಿದ್ದರು.