ಕುಂದಾಪುರ (ಮಾ.24): ಕ್ರೀಡಾ ಸಾಧಕ ಹಾಗೂ ಶಿಕ್ಷಕರಾದ ಪ್ರಶಾಂತ್ ಶೆಟ್ಟಿಯವರು ಉಡುಪಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿ ನಾಲ್ಕು ಪದಕಗಳನ್ನು ಪಡೆಯುದರ ಜೊತೆಗೆ ಮುಂದಿನ ಮೇ 18ರಿಂದ 21ರವರೆಗೆ ಕೇರಳದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಟ್ರಿಪಲ್ ಜಂಪ್ ಹಾಗೂ ಲಾಂಗ್ ಜಂಪ್ ವಿಭಾಗದಲ್ಲಿ ಕಂಚಿನ ಪದಕಗಳು, 400 ಮೀಟರ್ ಪುರುಷರ ರಿಲೇಯಲ್ಲಿ ಕಂಚಿನ ಪದಕ ಹಾಗೂ 4×100 ಮಿಶ್ರ ರಿಲೇಯಲ್ಲಿ ಬೆಳ್ಳಿ ಪದಕ ಗಳಿಸಿರುತ್ತಾರೆ.
ಇವರು ಕುಂದಾಪುರ ಟ್ರ್ಯಾಕ್ ಆಂಡ್ ಫೀಲ್ಡ್ ಎನ್ನುವ ಅಥ್ಲೇಟಿಕ್ ಕೋಚಿಂಗ್ ಅಕಾಡೆಮಿ ನಡೆಸುತ್ತಿರುವುದರ ಜೊತೆಗೆ ಕುಂದಾಪುರದ ಓಕ್ ವುಡ್ ಇಂಡಿಯನ್ ಸ್ಕೂಲ್ ಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
















