ಕೋಡಿ(ಮೇ,16): ಕಡಲ ಪರಿಸರ ರಕ್ಷಣೆಗೆ ನಿರಂತರ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರುವುದರ ಜೊತೆಗೆ ಇತ್ತೀಚೆಗೆ ಆಮೆ ಹಬ್ಬ ವನ್ನು ಬಹಳ ಅರ್ಥಪೂರ್ಣವಾಗಿ ಆಯೋಜಿಸಿದ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡ ಇದೀಗ ಪರಿಸರ ಸಂರಕ್ಷಣೆಗೆ ಇನ್ನೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಮತ್ಸೋದ್ಯಮಿ ಶ್ರೀ ಆನಂದ.ಸಿ.ಕುಂದರ್ ರವರ ಪ್ರಾಯೋಜಕತ್ವದ ಗೀತಾನಂದ ಫೌಂಡೇಶನ್(ರಿ) ಕೋಟ ಇವರ ಸಹಯೋಗದಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಕೋಡಿ ಸೀ ವಾಕ್ ಬೀಚ್ನಲ್ಲಿ ಮೀನಿನ ಆಕಾರದ ಕಸದ ತೊಟ್ಟಿಯನ್ನು ರಚನೆ ಮಾಡಿ ಸಮುದ್ರವನ್ನು ಮಾಲಿನ್ಯದಿಂದ ರಕ್ಷಿಸಲು ಪ್ಲಾಸ್ಟಿಕ್ನ ಮರುಬಳಕೆಯ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಲೋಹದ ರಚನೆಯು 8 ಅಡಿ ಅಗಲ ಮತ್ತು 3 ಅಡಿ ಅಗಲವಿರುವ ಈ ಮೀನಿನ ಆಕಾರದ ಕಸದ ತೊಟ್ಟಿಯನ್ನು ನಿರ್ಮಿಸಿ ಅದರಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ಬಾಟಲಿಗಳು ಮತ್ತು ಇತರ ವಸ್ತುಗಳನ್ನು ಹಾಕುವ ವ್ಯವಸ್ಥೆ ಮಾಡಲಾಗಿದೆ.
ಜನನಿಬಿಡ ಕೋಡಿ ಸೀವಾಕ್ ಬೀಚ್ನಲ್ಲಿ ಮೀನಿನ ಆಕಾರದ ತೊಟ್ಟಿಯನ್ನು ಸ್ಥಾಪಿಸುವ ಮೂಲಕ, ಪ್ಲಾಸ್ಟಿಕ್ನ ಮರುಬಳಕೆಯ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಮತ್ತು ಪರಿಸರವನ್ನು ಮತ್ತು ವಿಶೇಷವಾಗಿ ಸೂಕ್ಷ್ಮ ಸಮುದ್ರ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಪ್ರಯತ್ನಗಳಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಈ ಯೋಜನೆಯನ್ನು ಹಾಕಿಕೊಂಡಿದೆ.