ಕುಂದಾಪುರದ ಕುಂದೇಶ್ವರ ದೇವಸ್ಥಾನ ರಸ್ತೆಯ ಬಳಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಿಎ/ ಸಿಎಸ್ ಶಿಕ್ಷಣ ತರಬೇತಿ ಸಂಸ್ಥೆಯು ವಾಣಿಜ್ಯ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳಾದ ಸಿಎ ಮತ್ತು ಸಿಎಸ್ ಕೋರ್ಸುಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವುದರ ಮೂಲಕ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಸಂಸ್ಥೆಯಲ್ಲಿ ಸಿಎ ಮತ್ತು ಸಿಎಸ್ ಪರೀಕ್ಷೆಗಳಿಗೆ ಗುಣಮಟ್ಟದ ಬೋಧಕ ಸಿಬ್ಬಂದಿಗಳ ಮೂಲಕ ನಿರಂತರ ತರಬೇತಿಯನ್ನು ನೀಡಲಾಗುತ್ತದೆ.
ಅಖಿಲ ಭಾರತ ಮಟ್ಟದ ರ್ಯಾಂಕ್:
ಶಿಕ್ಷ ಪ್ರಭಾ ಸಂಸ್ಥೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಎ ಮತ್ತು ಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ರ್ಯಾಂಕ್ ಗಳಿಸಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳಾದ ವೈಷ್ಣವಿ ಅಖಿಲ ಭಾರತ ಕ್ಕೆ 21ನೇ ಮತ್ತು ಅಕ್ಷಯ್ ಕಾಮತ್ ಅವರು ಅಖಿಲ ಭಾರತ ಕ್ಕೆ 27ನೇ ರ್ಯಾಂಕ್ ಸಿಎ ಫೌಂಡೇಶನ್ ನಲ್ಲಿ ಪಡೆದರೆ, ಸಂಸ್ಥೆಯ ಸಿಎ ಇಂಟರ್ಮೀಡಿಯೇಟ್ ನ ವಿದ್ಯಾರ್ಥಿನಿ ವೈಷ್ಣವಿ ಎಂವಿ ಅವರು ಅಖಿಲ ಭಾರತ ಕ್ಕೆ 29ನೇ ರ್ಯಾಂಕ್ ಪಡೆಯುವುದರ ಮೂಲಕ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಸಿಎಸ್ ಫೌಂಡೇಶನ್ ಪರೀಕ್ಷೆಯಲ್ಲಿ ಕಾರ್ತಿಕ ಕೆ ಅವರು 200 ಅಂಕಕ್ಕೆ 171 ಅಂಕ ಪಡೆಯುವುದರ ಮೂಲಕ ಸಂಸ್ಥೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ. ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಸಿಎ ಫೌಂಡೇಶನ್, ಸಿಎ ಇಂಟರ್ಮೀಡಿಯೇಟ್, ಸಿಎಸ್ ಫೌಂಡೇಶನ್ (ಸಿಎಸ್ಇಇಟಿ ), ಸಿಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂತಿಮ ಹಂತದ ಪರೀಕ್ಷೆಯ ಸಿದ್ಧತೆಯಲ್ಲಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ವಿಲಾಸ್ ಶೆಟ್ಟಿ , ಪುನೀತ್ ಶೆಟ್ಟಿ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿ ದೇಶದ ಅತ್ಯುತ್ತಮ ಕಂಪನಿಯಲ್ಲಿ ನೌಕರಿ ಪಡೆದಿದ್ದಾರೆ.
ಸಿಎ/ಸಿಎಸ್ ಪರೀಕ್ಷೆಗೆ ನೂತನ ಬ್ಯಾಚ್ ಆರಂಭ:-
ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿರುವ ವಿದ್ಯಾರ್ಥಿಗಳಿಗಾಗಿ ಮೇ 25ರಿಂದ ನೂತನ ಬ್ಯಾಚ್ ಆರಂಭವಾಗಲಿದ್ದು ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಬಹುದು. ಮೇ 25ಕ್ಕೆ ಆರಂಭವಾಗುವ ಸಿಎ ಫೌಂಡೇಶನ್ ಪರೀಕ್ಷೆಯ ಬ್ಯಾಚ್ ನ ವಿದ್ಯಾರ್ಥಿಗಳನ್ನು ನವೆಂಬರ್ 2022ನ ಫೌಂಡೇಶನ್ ಪರೀಕ್ಷೆಗೆ ಸಿದ್ಧಗೊಳಿಸಲಾಗುವುದು. ಸಿಎಸ್ ವಿದ್ಯಾರ್ಥಿಗಳನ್ನು ಕೂಡ ನವೆಂಬರ್2022 ನ ಸಿಎಸ್ ಫೌಂಡೇಶನ್ (ಸಿಎಸ್ಇಇಟಿ ) ಪರೀಕ್ಷೆಗೆ ತರಬೇತಿಯನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಮೇ 25ಕ್ಕೆ ಆರಂಭಗೊಳ್ಳುವ ಬ್ಯಾಚ್ ಗೆ ನೋಂದಣಿ ಆಗುವುದರ ಮೂಲಕ ತಮ್ಮ ಆರು ತಿಂಗಳ ಸಮಯ ವ್ಯರ್ಥವಾಗುವುದನ್ನು ತಡೆಯಬಹುದು.
ವಿದ್ಯಾರ್ಥಿಗಳಿಗೆ ಸಿಎ/ಸಿಎಸ್ ಪರೀಕ್ಷೆ ಗೆ ಅನುಭವಿ ಲೆಕ್ಕಪರಿಶೋಧಕರ ಜೊತೆಗೆ ಅನುಭವಿ ಕಂಪನಿ ಸೆಕ್ರೆಟರಿ ಅವರು ಕೂಡ ಬೋಧಕ ಸಿಬ್ಬಂದಿಗಳಾಗಿರುವುದರಿಂದ ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ಉನ್ನತಿಗೆ ಅವರು ಸಹಕಾರಿಯಾಗಲಿದಾರೆ .ವಿದ್ಯಾರ್ಥಿವೇತನದ ಜೊತೆಗೆ ನಿಯಮಿತ ಬ್ಯಾಚ್ಗಳ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಕರ್ನಾಟಕದಲ್ಲಿ ಉತ್ತಮ ಗುಣಮಟ್ಟದ ಸಿಎ/ಎಸ್ಎಸ್ ತರಬೇತಿ ಸಂಸ್ಥೆಯಾಗಿ ಹೊರಹೊಮ್ಮಿದೆ.
ಹೆಚ್ಚಿನ ಮಾಹಿತಿಯ ಅಗತ್ಯವಿರುವ ವಿದ್ಯಾರ್ಥಿಗಳು ಕುಂದೇಶ್ವರ ದೇವಸ್ಥಾನ ರಸ್ತೆಯ ಉತ್ತಮ್ ಕ್ಲಿನಿಕ್ ಬಿಲ್ಡಿಂಗ್ನ ಎರಡನೇ ಮಹಡಿಯಲ್ಲಿರುವ ಸಂಸ್ಥೆಯ ಕಛೇರಿಗೆ ಭೇಟಿ ನೀಡಬಹುದು. ಸಂಸ್ಥೆಯ ವೆಬ್ಸೈಟ್ WWW.SHIKSHAPRABHA.COM ಗೆ ಲಾಗ್ಇನ್ ಆಗಬಹುದು ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.