ಕಾರ್ಕಳ (ಸೆ. 15) : ಇಲ್ಲಿನ ಪ್ರತಿಷ್ಠಿತ ಕ್ರಿಯೇಟಿವ್ ಪಿ ಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ ಎಸ್ ಮಾಹಿತಿ ಕಾರ್ಯಗಾರವನ್ನು ಸೆ.09 ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಖ್ಯಾತ ಕಂಪೆನಿ ಸೆಕ್ರೇಟರಿ ಸಂತೋಷ ಪ್ರಭುರವರು ವಿದ್ಯಾರ್ಥಿಗಳಿಗೆ ಸಿ.ಎಸ್ ನ ಮಹತ್ವದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ C.S ಎಂಬುದು ಒಂದು ಅತ್ಯುನ್ನತ ಹುದ್ದೆ ಇಂದು ಭಾರತದಲ್ಲಿ C.S (ಕಂಪೆನಿ ಸೆಕ್ರೆಟರಿ) ನ ಕೊರತೆ ಇದ್ದು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವು ಅಗತ್ಯ ಎಂದರು.
ಸಿ ಎಸ್ ಎನ್ನುವುದು ಶೈಕ್ಷಣಿಕ ಸಂಸ್ಥೆಯಲ್ಲಿ ಪ್ರಾಂಶುಪಾಲರು ಹೇಗೆ ವಿದ್ಯಾರ್ಥಿಗಳ, ಬೋಧಕ-ಬೋಧಕೇತರ ವರ್ಗದವರ ಸಮಗ್ರ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲಿಸುತ್ತಾರೆಯೋ ಹಾಗೆ ಒಬ್ಬ ಕಂಪೆನಿ ಸೆಕ್ರೆಟರಿಯೂ ಕೂಡಾ ತನ್ನೆಲ್ಲಾ ಕಂಪೆನಿ ಉದ್ಯೋಗಿಗಳ, ಆಡಳಿತ ವರ್ಗದವರ ಬಗ್ಗೆ ಸದಾ ಕಾಳಜಿವಹಿಸಿ, ಕಾರ್ಯೋನ್ಮುಖರಾಗುವುದರೊಂದಿಗೆ ಕಂಪೆನಿಯ ಯಶಸ್ಸಿನ ಬಗ್ಗೆ ಚಿಂತಿಸುವ ಮಹತ್ವಾಕಾಂಕ್ಷಿ ಹುದ್ದೆಯಾಗಿರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀ ರಾಘವೇಂದ್ರ ಬಿ ರಾವ್, ಶ್ರೀ ಉಮೇಶ್, ಶ್ರೀಮತಿ ಅಕ್ಷತಾ ಜೈನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಪ್ರಜ್ವಲ್ ವಂದಿಸಿದರು. ವಿದ್ಯಾರ್ಥಿನಿ ವಿನುತಾ ಕಾರ್ಯಕ್ರಮ ನಿರೂಪಿಸಿದರು.