Views: 132
ಬೈಂದೂರು (ಸೆ. 13): ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಜ್ಯೋತಿಕಾ ಪೂಜಾರಿಯವರು ೩೩ ನೇ ಸಾಲಿನ ದಕ್ಷಿಣ ಭಾರತ ವಲಯದ ಕಿರಿಯರ ವಿಭಾಗದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ 200ಮೀ ಓಟದಲ್ಲಿ ಚಿನ್ನದ ಪದಕ, ಮಿಶ್ರ ರೀಲೆಯಲ್ಲಿ ಬೆಳ್ಳಿ ಪದಕ ಹಾಗೂ400 ಮೀ ಓಟದಲ್ಲಿ ಕಂಚಿನ ಪದಕ ಪಡೆದು ಅಮೋಘ ಸಾಧನೆಗೈದಿದ್ದಾರೆ.