ಕುಂದಾಪುರ (ಅ,09): ಹಲವಾರು ಅಲ್ಬಂ ಹಾಡುಗಳು, ಸಿನಿಮಾ ಹಾಡನ್ನು ಹಾಡಿರುವ ಬಹುಮುಖ ಪ್ರತಿಭೆ ಗಾಯಕ ಅಕ್ಷಯ್ ಬಡಾಮನೆ ಈ ವರ್ಷದ RIHA Raising Star of India ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇತ್ತೀಚೆಗೆ RIHA India Organisation ಏರ್ಪಡಿಸಿದ್ದ RIHA Stars of India ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅತ್ತ್ಯುತ್ತಮ ಗಾಯಕ ಪ್ರಶಸ್ತಿಯನ್ನು ಗಾಯಕ ಅಕ್ಷಯ್ ಬಡಾಮನೆಯವರಿಗೆ ಪ್ರದಾನ ಮಾಡಲಾಯಿತು.
ಮೂಲತಃ ಕುಂದಾಪುರದ ಬೈಂದೂರಿನ ಕೆರ್ಗಾಲು ನಂದನವನ ಗ್ರಾಮದ ಅಕ್ಷಯ್ ಸುಮಾರು 25 ಕ್ಕೂ ಅಧಿಕ ಅಲ್ಬಂ ಹಾಡುಗಳಿಗೆ ಸಿನಿಮಾ ಹಾಡುಗಳಿಗೆ ,ಧ್ವನಿಯಾಗಿದ್ದಾರೆ. ಗಿಟಾರ್, ಕೀಬೋರ್ಡ್,ಕೊಳಲು ಕೂಡ ನುಡಿಸಬಲ್ಲ ಬಹುಮುಖ ಪ್ರತಿಭೆ.
ತನ್ನ ಪುಟ್ಟ ಸಾಧನೆಗೆ ಕಾರಣ ತನ್ನ ಗುರುಗಳು ಪ್ರವೀಣ್ ಹಾಸನ್ ಎನ್ನುವ ಇವರು ನನ್ನ ಪುಟ್ಟ ಸಾಧನೆಯ ಬೆನ್ನೆಲುಬಾಗಿ ಪ್ರೋತ್ಸಾಹಿಸಿದ ತಂದೆ ಮಂಜುನಾಥ ಪೂಜಾರಿ ಹಾಗೂ ತಾಯಿ ಅಕ್ಕಯ್ಯ ಕೂಡ ಕಾರಣ ಎಂದರು. ಹಲವು ವರ್ಷಗಳಿಂದ ಸಂಗೀತಾಭ್ಯಾಸ ಮಾಡಿಕೊಂಡು ಬಂದಿರುವ ಅಕ್ಷಯ್ ಗೆ ತಮ್ಮ,ತಂಗಿ,ಮಾವಂದಿರ ಹಾಗೂ ಸ್ನೇಹಿತರ ಪ್ರೋತ್ಸಾಹವು ನಿರಂತರವಾಗಿ ದೊರಿತಿದ್ದು ,ಹೀಗೆ ಇನ್ನಷ್ಟು ಪ್ರಯತ್ನ, ಮತ್ತಷ್ಟು ಪ್ರಶಸ್ತಿ ಪಡೆಯಲಿ ಎನ್ನುವುದು ನಮ್ಮ ಆಶಯ .