ಕೆಂಚನೂರು( ಡಿ.24): ಶ್ರೀ ಕ್ಷೇತ್ರ ಮೆಕ್ಕೆಕಟ್ಟು, ಶಿರಿಯಾರ ಇವರ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ವತಿಯಿಂದ ಡಿಸೆಂಬರ್ 25 ರಂದು ಕುಂದಾಪುರ ತಾಲೂಕಿನ ಕೆಂಚನೂರಿನಲ್ಲಿ ಅಂಬಿಕಾ ಪೂಜಾರಿ ಕಥಾ ಸಾಂಗತ್ಯದ ಬೇಳೂರು ವಿಷ್ಣುಮೂರ್ತಿ ನಾಯಕ್ ಪದ್ಯ ಸಾಹಿತ್ಯ ದ ಪ್ರೇಮ ಪಂಜರ ಯಕ್ಷಗಾನ ಅಂದು ರಾತ್ರಿ 9 ರಿಂದ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tag: general
ಜಾಡಿ : ಶ್ರೀ ಮಾಸ್ತಿ ಸೂಲದ ಹೈಗುಳಿ ಮತ್ತು ಪರಿವಾರ ದೈವಗಳ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮನವಿ
ಹೆಮ್ಮಾಡಿ (ಡಿ. 22): ಕುಂದಾಪುರ ತಾಲೂಕಿನ ದೇಲ್ಕುಂದ ಗ್ರಾಮದ ಇತಿಹಾಸ ಪ್ರಸಿದ್ದ ಜಾಡಿ ಕೋಟಿಮನೆ ಶ್ರೀಮಾಸ್ತಿ ಸೂಲದ ಹೈಗುಳಿ ಮತ್ತು ಪರಿವಾರ ದೈವಗಳ ದೈವಸ್ಥಾನ ಬಹಳ ವರ್ಷಗಳಿಂದ ಅಜೀರ್ಣ ವ್ಯವಸ್ಥೆಯಲ್ಲಿದ್ದು, ಕಟ್ಟಡ ಸಂಪೂರ್ಣ ಶಿತಿಲಗೊಂಡಿದೆ. ಆ ನಿಟ್ಟಿನಲ್ಲಿ ಊರ ಹಿರಿಯರು ಹಾಗೂ ದೈವವನ್ನು ನಂಬಿರುವ ಕುಟುಂಬಸ್ಥರು ಮತ್ತು ದಾನಿಗಳ ಸಹಕಾರದಿಂದ ಪುನರ್ನಿರ್ಮಾಣ ಮಾಡಿಸಲು ತೀರ್ಮಾನಿಸಿದ್ದು, ದೇವಸ್ಥಾನ ನಿರ್ಮಾಣಕ್ಕೆ ಅಂದಾಜು ಮೊತ್ತ 15,00,000/- ಬೇಕಾಗಿರುತ್ತದೆ. ಸದ್ಭಕ್ತರು ದೇಗುಲದಜೀರ್ಣೋದ್ಧಾರಕ್ಕೆ ಕೈಜೋಡಿಸಬೇಕೆಂದು ದೇಗುಲದ ಆಡಳಿತ […]
ಅಕ್ಷಯ್ ಬಡಾಮನೆಯವರಿಗೆ ರಿಹಾ ರೈಸಿಂಗ್ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ
ಕುಂದಾಪುರ (ಅ,09): ಹಲವಾರು ಅಲ್ಬಂ ಹಾಡುಗಳು, ಸಿನಿಮಾ ಹಾಡನ್ನು ಹಾಡಿರುವ ಬಹುಮುಖ ಪ್ರತಿಭೆ ಗಾಯಕ ಅಕ್ಷಯ್ ಬಡಾಮನೆ ಈ ವರ್ಷದ RIHA Raising Star of India ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ RIHA India Organisation ಏರ್ಪಡಿಸಿದ್ದ RIHA Stars of India ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅತ್ತ್ಯುತ್ತಮ ಗಾಯಕ ಪ್ರಶಸ್ತಿಯನ್ನು ಗಾಯಕ ಅಕ್ಷಯ್ ಬಡಾಮನೆಯವರಿಗೆ ಪ್ರದಾನ ಮಾಡಲಾಯಿತು. ಮೂಲತಃ ಕುಂದಾಪುರದ ಬೈಂದೂರಿನ ಕೆರ್ಗಾಲು ನಂದನವನ ಗ್ರಾಮದ ಅಕ್ಷಯ್ ಸುಮಾರು […]
ಕಾಂತಾರ…..ಇದು ದೈವಲೀಲೆಯ ಅವತಾರ…..
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನ ಕೆರಾಡಿ ಎನ್ನುವ ಹಳ್ಳಿಯೊಂದರಲ್ಲಿ ಚಿತ್ರೀಕರಣಗೊಂಡು, ಅದೇ ಹಳ್ಳಿಗರ ಮನೆಮಗ ಸ್ಯಾಂಡಲ್ ವುಡ್ ನ ಖ್ಯಾತ ನಟ -ನಿರ್ದೇಶಕ ರಿಷಬ್ ಶೆಟ್ಟಿಯವರು ನಾಯಕನಾಗಿ ನಟಿಸಿರುವ ಹಾಗೂ ಕೆ.ಜಿ.ಫ್ ಖ್ಯಾತಿಯ ಹೊಂಬಾಳೆ ಫಿಲ್ಸಂ ರವರ ನಿರ್ಮಾಣದಲ್ಲಿ ಮೂಡಿ ಬಂದ ಕಾಂತಾರ ಚಿತ್ರ ಕನ್ನಡದ ಸಿನಿಮಾರಂಗದಲ್ಲಿ ಹೊಸ ಅಲೆಯನ್ನು ಸ್ರಷ್ಠಿಸಿದೆ. ದೈವಾರಾಧನೆಯ ಜೊತೆಗೆ ಭೂ ಮಾಲೀಕತ್ವದ ಸಂಘರ್ಷದೊದಿಗೆ ಹೆಣೆದು ಕೊಂಡಿರುವ ಸಿನೆಮಾದ ಕಥೆ ತುಳುನಾಡು […]