ಕುಂದಾಪುರ(ಅ,20): ಅನಾರೋಗ್ಯಕ್ಕೆ ಪೀಡಿತರಾದ ತೀರ್ಥಹಳ್ಳಿ ತಾಲ್ಲೂಕಿನ ಬಸಾವಣಿ ಮನೆಯ ವಿಜಯ್ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ. ಈ ಹಿಂದೆ ಶಿರ್ವ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಕರ್ತವ್ಯ ನಿರ್ವಹಿಸುತ್ತಿದ್ದು ಇವರು 6 ತಿಂಗಳ ಹಿಂದೆ ಅನಾರೋಗ್ಯ ಸಮಸ್ಯೆಯಿಂದ ವೃತ್ತಿಯಿಂದ ದೂರವಿದ್ದು ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.
ವಿಷಯ ತಿಳಿದ ತಕ್ಷಣ ಸಮಾಜ ಸೇವಕ ಈಶ್ವರ್ ಮಲ್ಪೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮೃತಪಟ್ಟಿರುವ ವಿಜಯ್ ಅವರ ಮೃತದೇಹವನ್ನು ತೀರ್ಥಹಳ್ಳಿ ತಾಲ್ಲೂಕಿನ ಬಸಾವಣಿ ಎಂಬಲ್ಲಿಗೆ ಆಂಬುಲೆನ್ಸ್ ಮೂಲಕ ಸ್ವತಃ ತಾವೇ ಡ್ರೈವಿಂಗ್ ಮಾಡಿಕೊಂಡು ಹೋಗಿ ಉಚಿತವಾಗಿ ಮೃತದೇಹವನ್ನು ಮನೆವರೆಗೆ ತಲುಪಿಸಿ ಬಂದಿರುತ್ತಾರೆ.
ಈ ಸಂದರ್ಭ ಉಡುಪಿ ಪೋಲೀಸ್ ಹೆಚ್ಚುವರಿ ಅಧೀಕ್ಷಕರು, ಶಿರ್ವ ಪೊಲೀಸ್ ಠಾಣಾ ಉಪನಿರೀಕ್ಷಕರು ರಾಘವೇಂದ್ರ ಹಾಗೂ “ಹಲೋ” ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.