ಕುಂದಾಪುರ (ನ,24) : ಕುಂದಗನ್ನಡ ಭಾಷೆಯು ತನ್ನದೇ ಆದ ಸಂಸ್ಕೃತಿ ಯನ್ನು ಒಳಗೊಂಡಿದೆ. ನಮ್ಮ ತಾಯಿ ನುಡಿಯಾದ ಈ ಭಾಷೆಯು ತಾಯಿಯಷ್ಟೇ ಪ್ರಾಮುಖ್ಯವಾದುದು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಂದಗನ್ನಡ ಅಧ್ಯಯನ ಪೀಠದ ಸ್ಥಾಪನೆಯ ಈ ಸುಸಂದರ್ಭದಲ್ಲಿ ಮೊಟ್ಟ ಮೊದಲಬಾರಿಗೆ ಪದವಿ ಕಾಲೇಜೊಂದರಲ್ಲಿ ‘ಕುಂದಗನ್ನಡ ಸಂಘ’ವನ್ನು ಹುಟ್ಟುಹಾಕಿರುವುದು ಶ್ಲಾಘನೀಯ ಎಂದು ಕಾರ್ಕಳದ ವಿದ್ಯಾವರ್ಧಕ ಸಂಘ ಪ್ರೌಢಶಾಲೆಯ ಶಿಕ್ಷಕರಾದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹೇಳಿದರು.
ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕುಂದಗನ್ನಡ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ. ಉಮೇಶ್ ಶೆಟ್ಟಿ ಕುಂದಗನ್ನಡ ವಿಶಿಷ್ಟ ಭಾಷೆ, ಈ ಭಾಷೆಯನ್ನು ಮಾತನಾಡುವ ಜನಸಮುದಾಯ ಉಡುಪಿ ಜಿಲ್ಲೆಯಲ್ಲಿದ್ದಾರೆ, ಆದರೆ ಅಧ್ಯಯನದ ಚೌಕಟ್ಟಿನೊಳಗಿಲ್ಲ ಹೀಗಾಗಿ ನಮ್ಮ ಸಂಸ್ಥೆ ಅದಕ್ಕೆ ಮುನ್ನುಡಿ ಬರೆದಿದೆ ಎಂದರು. ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಕುಂದಗನ್ನಡ ಸಂಘದ ಸಂಯೋಜಕರಾದ ಸುಕುಮಾರ್ ಶೆಟ್ಟಿ ಕಮಲಶಿಲೆ ಸ್ವಾಗತಿಸಿದರು. ವಿನಯಾ. ವಿ. ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳಾದ ಪ್ರಥಮ ಬಿ.ಕಾಂ. ‘ಬಿ’ ವಿಭಾಗದ ನಿಖಿತಾ ಅತಿಥಿಗಳನ್ನು ಪರಿಚಯಿಸಿದರು. ಪ್ರಣೀತಾ ಕಾರ್ಯಕ್ರಮ ನಿರೂಪಿಸಿದರು.