ತೀರ
ದಿನವೂ ನಿನ್ನ ನೋಡಿಯೇ ‘ತೀರ’ಬೇಕೆಂದು ತೀರಕ್ಕೆ ನಾ ಬರುವೆ
ನಡುವೆ ನೀರವ ಮೌನದ ನೀರಲಿ ನಿನ್ನ ಮಂದಬೆಳಕು ಮಂದಹಾಸವ ಚೆಲ್ಲಿ
ಅಂಧಕಾರದಿ ಕುಳಿತು ನಿನ್ನಂದವ ಕಂಡು ಅಂತರಂಗಕ್ಕೆ ಆವರಿಸಿತು ಮಂಪರು
ದೂರ ತೀರದಲ್ಲಿರುವ ನಿನ್ನ ಸೇರುವ ದುಸ್ಸಾಹಸವಿಲ್ಲ ,
ಏನೇ_ಹೇಳಿ,
ದೂರ ತೀರದಿ ನಿಂತು ನೋಡಿ ‘ತೀರು’ವೆನಷ್ಟೆ….