ಕುಂದಾಪುರ (ಫೆಬ್ರವರಿ 23): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಪ್ರೊಫೆಷನಲ್ ಕೋರ್ಸ್ಗಳ ಬಗ್ಗೆ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಪ್ರತಿಭಾನ್ವಿತ ವಿದ್ಯಾರ್ಥಿನಿ ಪ್ರತೀಕ್ಷಾ, ಪ್ರಥಮ ಬಿ.ಕಾಂ. (ಡಿ) ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಮಾತನಾಡಿ, ಪ್ರೊಫೆಷನಲ್ ವಿದ್ಯಾರ್ಥಿಗಳಿಗೆ, ಓದಿನ ಬಗ್ಗೆ ಇರಬೇಕಾದ ಶ್ರದ್ಧೆ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲೇ ಬೇಕಾದ ಶಿಸ್ತು ಹಾಗೂ ಪಾಲಿಸಬೇಕಾದ ಸಮಯ ಪರಿಪಾಲನೆಯ ಮಹತ್ವದ ಕುರಿತು ಅರಿವು ಮೂಡಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿ ರೀಚ್ ಸಂಸ್ಥೆ, ಉಡುಪಿ ಇದರ ಸ್ಥಾಪಕರಾದ CS. ಸಂತೋಷ್ ಪ್ರಭು ಅವರು ಮಕ್ಕಳಿಗೆ ಪೂರ್ವಾಹ್ನದ ಅವಧಿಯಲ್ಲಿ ಪ್ರೊಫೆಷನಲ್ ಕೋರ್ಸ್ನ ಸಂಪೂರ್ಣ ಮಾಹಿತಿಯನ್ನು ಮತ್ತು ಅದಕ್ಕೆ ಬೇಕಾದ ತಯಾರಿಯ ಬಗ್ಗೆ ಹೇಳಿದರು.
ವಿ ರೀಚ್ ಸಂಸ್ಥೆಯ ಸಂಯೋಜಕರಾದ ನಾಗೇಶ್ ಶೆಣೈ ಉಪಸ್ಥಿತರಿದ್ದರು. ಅಪರಾಹ್ನದ ಅವಧಿಯಲ್ಲಿ CA. ಆನಂದ ತೀರ್ಥ ಅವರು ಮಕ್ಕಳಿಗೆ ಪ್ರಾಯೋಗಿಕ ಚಟುವಟಿಕೆಗಳ ಮೂಲಕ CA ಪ್ರೊಫೆಷನಲ್ ಕೋರ್ಸ್ನ ವ್ಯಾಪ್ತಿಯನ್ನು ತಿಳಿಸಿದರು.
ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವೀಣಾ ವಿ. ಭಟ್ ಪ್ರಸ್ತಾವಿಸಿದರು. ವಾಣಿಜ್ಯ ಉಪನ್ಯಾಸಕ ಹಾಗೂ ಪ್ರೊಫೆಷನಲ್ ಬಿ.ಕಾಂ. ಇದರ ಸಂಯೋಜಕ ಶ್ರೀ ಸುಹಾಸ್ ಜಟ್ಟಿಮನೆ ವಂದಿಸಿದರು. ವಿದ್ಯಾರ್ಥಿನಿಯರಾದ ಪೂಜಾ ಶೆಟ್ಟಿ ಹಾಗೂ ಶ್ರೇಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಆಯೋಜಿಸಿದ ಚಟುವಟಿಕೆಗಳಲ್ಲಿ ಭಾಗವಹಿಸಿದ ಅತ್ಯುತ್ತಮ ಮೂರು ತಂಡಗಳಿಗೆ ಬಹುಮಾನ ನೀಡಿ ಗುರುತಿಸಲಾಯಿತು.