ಕುಂದಾಪುರ (ಆ,13) : ಇಲ್ಲಿನ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ‘ವಸ್ತ್ರ ಭಾರತೀ’ ಅಂತರ್ ತರಗತಿ ದೇಶಭಕ್ತಿ ಫ್ಯಾಶನ್ ಪೆರೇಡ್ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಸ್ಪರ್ಧೆಯ ಪ್ರಥಮ ಸುತ್ತಿನಲ್ಲಿ 17 ತಂಡಗಳು ಭಾಗವಹಿಸಿ, ದ್ವಿತೀಯ ಸುತ್ತಿಗೆ 10 ತಂಡಗಳು ಆಯ್ಕೆಯಾದವು. ಆರು ವಿದ್ಯಾರ್ಥಿಗಳನ್ನೊಳಗೊಂಡ ತರಗತಿವಾರು ತಂಡದವರು ದಂಡಿ ಸತ್ಯಾಗ್ರಹ, ಬೇರೆ ಬೇರೆ ರಾಜ್ಯಗಳ ಸಂಸ್ಕೃತಿ, ಜನಪದ, ಭಾವೈಕ್ಯತೆ ಹಾಗೂ ವಿವಿಧ ಪ್ರಾದೇಶಿಕತೆಯನ್ನು ಬಿಂಬಿಸುವ ಉಡುಗೆಯನ್ನು ಧರಿಸಿಕೊಂಡು ತಮ್ಮ ಪ್ರದರ್ಶನ ನೀಡಿದರು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಈ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಉದಯವಾಣಿ ದಿನಪತ್ರಿಕೆಯ ಉಪ ಮುಖ್ಯ ವರದಿಗಾರ ಲಕ್ಷ್ಮಿ ಮಚ್ಚಿನ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಹಾಗೂ ನಿರ್ವಹಣಾ ವಿಭಾಗದ ಸಹ ಪ್ರಾಧ್ಯಾಪಕ ಪ್ರವೀಣ್ ಮೊಗವೀರ ಗಂಗೊಳ್ಳಿ ಸಹಕರಿಸಿದರು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ ಉಮೇಶ್ ಶೆಟ್ಟಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ವಾಸುದೇವ್ ಭಟ್ ಪ್ರಾಧ್ಯಾಪಕರಾದ ಅಕ್ಷಯ್ ಕುಮಾರ್, ಶರತ್ ಕುಮಾರ್, ಕಿಶೋರ ಕೃಷ್ಣ ಉಪಸ್ಥಿತರಿದ್ದರು. ಸಂಯೋಜಕಿ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು











