ಕೊಲ್ಲೂರು( ಜ ,19) : ಸಿಗಂದೂರು ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ 69ನೇ ನ್ಯಾಶನಲ್ ಸ್ಕೋಲ್ ಗೇಮ್ಸ್ 2025-26ರ ನೆಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಬೆಳ್ಳಿಯ ಪದಕವನ್ನು ಗಳಿಸಿದ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಗಣೇಶ್ ಕೆ ಆರ್ (ಕರ್ನಾಟಕ ತಂಡದ ನಾಯಕ), ನಿರೂಪ್ ಪಿ, ದಿಗಂತ್ ಎಂ.ಡಿ, ರೋಹಿತ್ ಸಿ.ಕೆ, ಯಶಸ್ ಎಂ.ಕೆ ಹಾಗೂ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಜಿ.ಬಿ, ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ಇವರನ್ನು ಸನ್ಮಾನಿಸಿ ಗೌರವಿಸಿದರು.

ಸಭೆಯಲ್ಲಿ ದೇವಸ್ಥಾನದ ಅನುವಂಶಿಯ ಮುಕ್ತೇಶ್ವರರಾದ ಡಾ. ರಾಮಪ್ಪನವರು, ದೇವಸ್ಥಾನದ ಪ್ರಧಾನ ಕಾರ್ಯಧರ್ಶಿ ರವಿಕುಮಾರ್, ಸಾಗರ ಸರ್ಕಲ್ ಇನ್ಸ್ಪೇಕ್ಟರ್ ಸಂತೋಷ್ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಟಾಕಪ್ಪ ಕಣ್ಣೂರು, ಸಾಗರ ಸಬ್ ಇನ್ಸ್ಪೇಕ್ಟರ್ ನಾಗರಾಜ್, ಜಾಕಿ ಗಣೇಶ್, ಪಶುವೈದಿಕೀಯ ಸದಸ್ಯರಾದ ವಿಜಯ ಕುಮಾರ್ ಹೆರಬೆಟ್ಟು, ಶಿಕ್ಷಕ ಸಾಹಿತಿ ಚಂದ್ರಪ್ಪ ಆಳೂರು, ಪಂಚಾಯತ್ ಅಭಿವೃಧ್ದಿ ಅಧಿಕಾರಿ ನವೀನ್ ಗೌಡ್ರ, ತಾಲೋಕ್ ಪಂಚಾಯತ್ ಮಾಜಿ ಸದಸ್ಯರಾದ ಲಿಗಂಪ್ಪ ಉಪಸ್ಥಿತರಿದ್ದರು.











