ಗಂಗೊಳ್ಳಿ(ಆ,26): ಇಲ್ಲಿನ ಸರಸ್ವತಿ ವಿದ್ಯಾಲಯದ ಲೈಬ್ರರಿ ಹಾಲ್ ನಲ್ಲಿ ಇತ್ತೀಚಿಗೆ ಗಂಗೊಳ್ಳಿಯ ರೋಟರಾಕ್ಟ್ ಕ್ಲಬ್ ನ ಪದಪ್ರಧಾನ ಸಮಾರಂಭ ಜರುಗಿತು . 2022 -23ನೇ ಸಾಲಿನ ರೋಟರಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಶ್ರೇಯಾ. ಜಿ ಹಾಗೂ ಕಾರ್ಯದರ್ಶಿಯಾಗಿ ಕಿರಣ್ ಆಯ್ಕೆಯಾದರು.
ರೋಟರಾಕ್ಟ್ ಡಿಸ್ಟ್ರಿಕ್ಟ್ ಚೇರ್ಮನ್ ಜೈ ವಿಠ್ಠಲ್, ಪದಪ್ರಧಾನ ನೆರವೇರಿಸಿದರು. ರೊಟ್ರಾಕ್ಟ್ ವೈಸ್ ಚೇರ್ಮನ್ ಚಂದ್ರ ಪೂಜಾರಿ, ರೊಟ್ರ್ಯಾಕ್ ಜೋನಲ್ ಕೋ ಆರ್ಡಿನೇಟರ್ ಜಾನ್ಸನ್ ಡಿ ಅಲ್ಮೇಡ ಪದ ಪ್ರಧಾನ ಸಮಾರಂಭವನ್ನು ನೆರವೇರಿಸಿದರು.
ರೋಟರಿ ಕ್ಲಬ್ ಅಧ್ಯಕ್ಷೆ ಸುಗುಣ ಆರ್ ಕೆ ಮತ್ತು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ಶುಭ ಹಾರೈಸಿದರು. ಗಂಗೊಳ್ಳಿ ರೋಟರಿ ಕ್ಲಬ್ ನ ಯೂಥ್ ಸರ್ವಿಸ್ ಚೇರ್ಮನ್ ನಾಗೇಂದ್ರ ಪೈ . ಕ್ಲಬ್ನ್ ನ ಕಾರ್ಯದರ್ಶಿ ಚಂದ್ರಕಲಾ ಎಸ್ ಉಪಸ್ಥಿತರಿದ್ದರು ನಿರ್ಗಮನ ರೋಟರಾಕ್ಟ್ ಅಧ್ಯಕ್ಷೆ ಅಮೀಕ್ಷಾ ಡಿ .ನಾಯ್ಕ್ ಅತಿಥಿಗಳನ್ನು ಸ್ವಾಗತಿಸಿ ಹಿಂದಿನ ಸಾಲಿನ ರೋಟರಾಕ್ಟ್ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು. ರೋಟರಿ ಕ್ಲಬ್ಬಿನ ಸದಸ್ಯರಾದ ರಾಮನಾಥ್ ನಾಯಕ್ಕ, ಲಕ್ಷ್ಮಿಕಾಂತ್ ಮಡಿವಾಳ,ಕೃಷ್ಣ ಪೂಜಾರಿ,ಗೋಪಾಲ್ ಬಿಲ್ಲವ, ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕೀರ್ತಿಭಟ್, ದೀಕ್ಷಾ ಮತ್ತು ಮಹಿಮಾ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿಕಿರಣ್ ಧನ್ಯವಾದ ಅರ್ಪಿಸಿದರು.