ಕೊಲ್ಲೂರು( ಆ .30): ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನದ ಪ್ರಯುಕ್ತ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀಧರ ಶೆಟ್ಟಿ ಕೊಕ್ಕರ್ಣೆ ಹಾಗೂ ಪತ್ನಿ ಗುಣವತಿ ಶ್ರೀಧರ ಶೆಟ್ಟಿ ಯವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಸುಕೇಶ ಶೆಟ್ಟಿ ಹೊಸಮಠ, ಕಾರ್ಯದರ್ಶಿ ದಿನೇಶ ಶೆಟ್ಟಿ ಕಿರಾಡಿ, ದೈಹಿಕ ಶಿಕ್ಷಣ ಉಪನ್ಯಾಸಕರಾದ ವಿಜಯ ಕುಮಾರ ಶೆಟ್ಟಿ , ರಾಘು ಸುಜನ ಹಾಗೂ ರವೀಂದ್ರ ಎಂ ಶೆಟ್ಟಿ ಉಪಸ್ಥಿತರಿದ್ದರು.










