ಕುಂದಾಪುರ (ಫೆ:19) ಭಾರತೀಯ ಜನತಾ ಪಾರ್ಟಿ ಕುಂದಾಪುರ ವಿಧಾನಸಭಾ ಕ್ಷೇತ್ರ ಕುಂದಾಪುರ ಮಂಡಲ ಮಹಿಳಾ ಮೋರ್ಚಾದ ಪ್ರಥಮ ಕಾರ್ಯಕಾರಣಿ ಸಭೆ ಫೆಬ್ರವರಿ 18ರಂದು ಭಾಜಪ ಕಾರ್ಯಾಲಯ ಕುಂದಾಪುರದಲ್ಲಿ ನಡೆಯಿತು.
ಬಿಜೆಪಿಯಲ್ಲಿ ಮಹಿಳೆಯರನ್ನು ತಾಯಿಯಂತೆ ಪೂಜನೀಯವಾಗಿ ಗೌರವಿಸಲಾಗುತ್ತದೆ, ಮಹಿಳಾ ಮೋರ್ಚದಲ್ಲಿ ಇನ್ನಷ್ಟು ಮಹಿಳೆಯರನ್ನು ಸಂಘಟಿತರಾಗಿ ಸಶಕ್ತಗೊಳಿಸಿ ಬೇಕಿದೆ, ಮಹಾಶಕ್ತಿ ಕೇಂದ್ರಗಳಲ್ಲೂ ಮಹಿಳಾ ಮೋರ್ಚಾ ರಚನೆಯಾಗಬೇಕು ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ವೀಣಾ ಶೆಟ್ಟಿಯವರು ಸದ್ರಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ಮಂಡಲದ ಅಧ್ಯಕ್ಷರಾದ ಶಂಕರ ಅಂಕದಕಟ್ಟೆಯವರುವರು ಮಾತನಾಡುತ್ತಾ ಕುಂದಾಪುರದ ಏಳು ಮಹಾ ಶಕ್ತಿಕೇಂದ್ರಗಳ 37 ಪಂಚಾಯಿತಿಗಳ ಪೈಕಿ 30 ರಷ್ಟು ಬಿಜೆಪಿ ಬೆಂಬಲಿತರು ಅಧಿಕಾರ ಪಡೆದಿದ್ದಾರೆ, ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಬಿಜೆಪಿ ಅಧಿಕಾರದಲ್ಲಿದೆ, ಮಹಿಳಾ ಮೀಸಲಾತಿ ಹೆಚ್ಚಾಗಿದೆ, ಸರಕಾರದ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ ಮಾರ್ಚ್ ತಿಂಗಳ ನಡೆಯುವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಆರೋಗ್ಯ ಶಿಬಿರಗಳನ್ನು ತಾಲ್ಲೂಕುಗಳಲ್ಲಿ ಹಮ್ಮಿಕೊಳ್ಳಲಾಗುವುದು. ಸಾಧಕ ಮಹಿಳೆಯರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಅಧ್ಯಕ್ಷೀಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗುಣರತ್ನ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿತ ಶೆಟ್ಟಿ,ಕುಂದಾಪುರ, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ಜಿಲ್ಲಾ ಪಂಚಾಯಿತಿನ ಸದಸ್ಯರಾದ ಶ್ರೀಲತಾ ಸುರೇಶ್ ಶೆಟ್ಟಿ, ಶ್ರೀಮತಿ ಲಕ್ಷ್ಮೀ ಮಂಜು ಬಿಲ್ಲವ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಪ್ರಧಾನ ಕಾರ್ಯದರ್ಶಿಗಳಾದ, ಅನಿತಾ ಶ್ರೀಧರ, ಸೌರಭಿ ಪೈ, ಹಾಗೂ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು. ತ್ರಿವೇಣಿ ಸಂಗಮ್ ಸ್ವಾಗತಿಸಿದರು, ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ ತಾ.ಪಂ, ಸ್ಥಾಯಿ ಸಮಿತಿಯ ಅಧ್ಯಕ್ಷೆ ರೂಪಾ.ಬಿ.ಪೈ ಪ್ರಸ್ತಾವಿಸಿದರು, ಸುರೇಂದ್ರ ಕಾಂಚನ್ ಸನ್ಮಾನ ಪತ್ರವನ್ನು ವಾಚಿಸಿದರು, ರೋಹಿಣಿ.ಎ.ಪೈ. ನಿರೂಪಿಸಿದರು.