ಗಂಗೊಳ್ಳಿ (ಫೆ.24): ರಾಷ್ಟ್ರೀಯ ಮೀನುಗಾರರ ಸಂಘ ನವದೆಹಲಿ ಇದರ ರಾಜ್ಯ ಉಪಾಧ್ಯಕ್ಷರಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ನಾಯಕ ಯೋಗಿಶ್ ಶಿರೂರು ಆಯ್ಕೆಯಾಗಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರನ್ನು ರಾಷ್ಟ್ರೀಯ ಮೀನುಗಾರರ ಸಂಘದ ಅಧ್ಯಕ್ಷ ಯು. ಆರ್. ಸಭಾಪತಿ ಮತ್ತು ರಾಜ್ಯಾಧ್ಯಕ್ಷ ರಾಮು ಮೊಗೇರ ರವರು ನೇಮಕ ಮಾಡಿದ್ದಾರೆ.










