ಕುಂದಾಪುರ (ಜೂ, 8) : ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ಕುಂದಾಪುರ ತಂಡದ ವತಿಯಿಂದ ಜೂನ್ 6 ರಂದು ಸಂತೆಕಟ್ಟೆಯ ಕೃಷ್ಣಾನುಗ್ರಹ ಆಶ್ರಮ ಹಾಗೂ ಉಪ್ಪೂರಿನ ಸ್ಪಂದನ ಆಶ್ರಮದ ಮಕ್ಕಳಿಗೆ ದಾನಿಗಳಾದ ಜೈ ಕುಂದಾಪ್ರ ಸೇವಾ ಟ್ರಸ್ಟ್ ರಿ. ಕುಂದಾಪುರ ಇದರ ಗೌರವ ಸಲಹೆಗಾರ ದಿನೇಶ್ ಗಾಣಿಗ ಕೋಟ ಹಾಗೂ ಕೋಟೇಶ್ವರದ ಬ್ರಹ್ಮಶ್ರೀ ಡಿಸ್ಟ್ರಿಬ್ಯೂಟರ್ ನ ಮಾಲಿಕರಾದ ಸಂತೋಷ್ ಶೆಟ್ಟಿನೀಡಿದ ಸಹಾಯಹಸ್ತದಿಂದ ದಿನಬಳಕೆಯ ಸಾಮಾಗ್ರಿ ಹಾಗೂ ತಿಂಡಿ ತಿನಿಸುಗಳನ್ನು ಹಸ್ತಾಂತರಿಸಲಾಯಿತು.
ಸಮಾಜಸೇಕರು ಹಾಗೂ ಪತ್ರಕರ್ತರಾದ ದಿನೇಶ್ ಗಾಣಿಗ, ಸಂತೋಷ್ ಪಡುಕರೆ, ಜಯರಾಜ್ ಪಡುಕರೆ, ಪುಂಡಲೀಕ ತೆಕ್ಕಟ್ಟೆ, ಮನೀಶ್ ಕುಲಾಲ್, ಶ್ರೀದೇವಿ, ಸುರೇಶ್ ಶೆಟ್ಟಿ, ಅಕ್ಷಯ, ಅಶೋಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.