ದೂರ ಇದ್ದರೂ, ಹತ್ತಿರವೇ ಇದ್ದಂತೆ
ಅನಿಸುತಿದೆ ಮನದೊಳಗೆ…ನೀ ಮನದೊಳಗೆ…. ನೀ ಮರೆಯಲಿ…ಎಲ್ಲೋ ನಿಂತು ನೋಡುತ್ತಿರುವಂತೆ
ಎಲ್ಲಿರುವೆ ನೀನು …..?
ಮನದ ಮೂಲೆಯಲಿ
ಎಲ್ಲೋ ಸುಪ್ತವಾಗಿ ಕುಳಿತ ಸವಿ ನೆನಪುಗಳು
ಗೂಡು ಕಟ್ಟಿ ಹಾರಲು ಕಾಯುತಿದೆ
ಎಲ್ಲಿರುವೆ ನೀನು …..?
ಬಯಕೆಗಳ ಭಾಗ್ಯವಿಧಾತೆ
ಬಾಳಿನ ಪ್ರೇಮದೇವತೆಯೇ
ನನ್ನ ಕನಸುಗಳ ಕನಸುಗಾರ್ತಿಯೇ
ಎಲ್ಲಿರುವೆ ನೀನು……..?
ನೆನಪಾಗಿ ಕಾಡುವ ಭಾವನಾ
ಮನಸಿನ ಕದ ತಟ್ಟುವ ಕವನ
ಮನದೊಳಗೆ ನೆನಪುಗಳ ಕದನ
ಎಲ್ಲಿರುವೆ ನೀನು, ….?
ರೂಪಸಿಯೇ …ಕನಸುಗಾರ್ತಿಯೇ
ಕವನದ ಒಡತಿಯೇ
ಕಾಮನೆಯು ಹೆಪ್ಪುಗಟ್ಟಿಲು ಕಾಯುತಿದೆ ನಿನಗಾಗಿ
ಎಲ್ಲಿರುವೆ ನೀನು….?
ಮನವ ಕಾಡುವ ರೂಪಸಿಯೇ……
ಎಲ್ಲಿರುವೆ ನೀನು….?

✍️ಈಶ್ವರ ಸಿ ನಾವುಂದ.










