ಕುಂದಾಪುರ (ಜು, 4): ಡಾ.ಬಿ.ಬಿ .ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕಾಲೇಜು ಕುಂದಾಪುರ ಹಾಗೂ ಕುಂದಾಪುರದ ಪ್ರಸಿದ್ಧ ತರಬೇತಿ ಸಂಸ್ಥೆ ಸೃಷ್ಟಿ ಇನ್ಫೋಟೆಕ್, (ಕಿಯೋನಿಕ್ಸ್ ಕುಂದಾಪುರ, ಚಿನ್ಮಯಿ ಆಸ್ಪತ್ರೆಯ ಹತ್ತಿರ) ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದಲ್ಲಿ ಪ್ರಪ್ರಥಮ ಬಾರಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವನ್ನು 2021-22 ರ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಾಗುತ್ತಿದೆ.

ಪದವಿ ಕೋರ್ಸುಗಳ ಜೊತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಇದು ಅನುಕೂಲಕರವಾಗಿದ್ದು ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗಳಾದ PGCET, CAT, MAT, ಸರಕಾರಿ ಉದ್ಯೋಗಗಳಾದ FDA, SDA, Postal Dept, PSI, PDO etc, ಕಾರ್ಪೊರೇಟ್ ಸಂದರ್ಶನ ಎದುರಿಸಲು ಬೇಕಾಗುವ ಅರ್ಹತೆಯ ಜೊತೆಗೆ ಬ್ಯಾಂಕಿಂಗ್ ಪರೀಕ್ಷೆಗಳಾದ IBPS, SBI, Co-operative Bank ಹಾಗೂ Group Discussion, Personal Interviews ಹಾಗೂ ಇತರ ವ್ಯಕ್ತಿತ್ವ ವಿಕಸನದ ಕೋರ್ಸುಗಳು ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಲಭ್ಯವಾಗಲಿದೆ.
ವಿದ್ಯಾರ್ಥಿಗಳು ಪದವಿ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ಧತೆ ನಡೆಸಲು ಇದು ಸುವರ್ಣಾವಕಾಶ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕೆ. ಉಮೇಶ್ ಶೆಟ್ಟಿ ಹಾಗೂ ಸೃಷ್ಟಿ ಇನ್ಫೋಟೆಕ್ & ಕಿಯೋನಿಕ್ಸ್ ಕಂಪ್ಯೂಟರ್ ಎಜುಕೇಶನ್ ಕುಂದಾಪುರ ಇದರ ಮುಖ್ಯಸ್ಥರಾದ ಶ್ರೀ ಹರ್ಷವರ್ಧನ್ ಶೆಟ್ಟಿ ತಿಳಿಸಿದ್ದಾರೆ.










