ನನ್ನೆಲ್ಲಾ ಅಭಿಮಾನಿ ಬಂಧುಗಳಿಗೆ ಪ್ರೀತಿ ಪೂರ್ವಕ ಧನ್ಯವಾದಗಳು. ನಾನಾಯ್ತು, ನನ್ನ ಸಮಾಜ ಸೇವೆ ಕಾರ್ಯ ಆಯ್ತು ಎಂದು ಎಲೆಮರೆಯ ಕಾಯಿಯಂತಿದ್ದ ನನ್ನನ್ನು ಇಂದು ನೀವು ಗುರುತಿಸಿ, ಸನ್ಮಾನಿಸಿ ಪ್ರೀತಿಯಿಂದ ಗೌರವಿಸುತ್ತಿರುವುದು ನನ್ನ ಸಮಾಜಸೇವಾ ಕಾರ್ಯದ ಜವಾಬ್ದಾರಿ ಇನ್ನೂ ಹೆಚ್ಚಿಸಿದಂತೆ ಭಾಸವಾಗುತ್ತಿದೆ.
ವಿವಿಧ ಮಾಧ್ಯಮಗಳಲ್ಲಿ ನನ್ನ ಸಮಾಜ ಸೇವಾ ಕಾರ್ಯದ ಕುರಿತು ಸಂದರ್ಶನ, ಲೇಖನಗಳು ಬಿತ್ತರಗೊಂಡಿದೆ. ಆದರೆ ನನ್ನ ಈ ಸಮಾಜ ಸೇವಾ ಕಾರ್ಯಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಮುತುವರ್ಜಿವಹಿಸಿದ ಪ್ರಮುಖ ವ್ಯಕ್ತಿ ಕುಂದವಾಹಿನಿ ಅಂತರ್ಜಾಲ ಸುದ್ದಿತಾಣ ಬಳಗದ ಈಶ್ವರ್ ಸಿ. ನಾವುಂದ.
ಚಿಂತಕ ಹಾಗೂ ಬರಹಗಾರರಾದ ಈಶ್ವರ್ ಸಿ. ನಾವುಂದ ರವರು ನನ್ನ ಕುರಿತಾಗಿ ಬರೆದ ಒಂದು ಸಂದರ್ಶನ ಲೇಖನ ಇಂದು ನನ್ನನ್ನು ಜನರ ನಡುವೆ ತಂದು ನಿಲ್ಲಿಸಿದೆ. ಹುಟ್ಟು ಸಹೋದರನಲ್ಲದಿದ್ದರೂ ಹ್ರದಯ ಗೆದ್ದ ಅಣ್ಣ ಈಶ್ವರ ನಾವುಂದ.
ಕುಂದವಾಹಿನಿ ಅಂತರ್ಜಾಲ ಸುದ್ದಿತಾಣದ ಬಳಗದ ಸರ್ವ ಸದಸ್ಯರು ನನ್ನ ಸಮಾಜಸೇವಾ ಚಟುವಟಿಕೆಗಳ ಮೇಲೆ ನಿರಂತರ ಬೆಳಕು ಚೆಲ್ಲತ್ತಾ ಬಂದಿದ್ದಾರೆ.
ಹೀಗೆ ನಿಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲಿರಲಿ… ಸೇವೆ ನಿರಂತರ…
ಎಂದಿಗೂ ಸದಾ ನಿಮ್ಮ ಮನೆ ಮಗ ಈಶ್ವರ್ ಮಲ್ಪೆ










