ಹೆಮ್ಮಾಡಿ(ಸೆ,7): ಹೆಮ್ಮಾಡಿ ಭಾಗದ ರಿಕ್ಷಾ ಚಾಲಕ ಮಾಲಕರ ಬಹುದಿನದ ಬೇಡಿಕೆಯಾಗಿದ್ದ ರಿಕ್ಷಾ ನಿಲ್ದಾಣವನ್ನು ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗಿದ್ದು,ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು ಉದ್ಘಾಟಿಸಿ ಶುಭಹಾರೈಸಿದರು.
ರಿಕ್ಷಾ ಚಾಲಕ- ಮಾಲಕರ ಜನ ಪರ ಕಾಳಜಿಯನ್ನು ಪ್ರಶಂಸಿದ ಶಾಸಕರು ರಿಕ್ಷಾ ನಿಲ್ದಾಣಕ್ಕೆ ಇಂಟರ್ಲಾಕ್ ಅಳವಡಿಸಲು ಒಂದು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು, ಪಕ್ಷದ ಕಾರ್ಯಕರ್ತ ಮತ್ತು ರಿಕ್ಷಾ ಚಾಲಕ & ಮಾಲಕರು ಉಪಸ್ಥಿತರಿದ್ದರು.