ಕುಂದಾಪುರ (ಸೆ, 13) : ಕುಂದೇಶ್ವರ ದೇವಸ್ಥಾನ ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡಮಿ ಆಫ್ ಕಾಮರ್ಸ್ ಏಜುಕೇಶನ್ (ಸ್ಪೇಸ್) ಸಿಎ/ಸಿಎಸ್/ಸಿಎಂಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳು ಇನ್ಟಿಟ್ಯೂಟ್ ಆಫ್ ಚಾರ್ಟರ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಮತ್ತು ಸಿಎ ಪೌಂಡೇಶನ್ ಪರೀಕ್ಷೆಯಲ್ಲಿ ಶ್ರೇಷ್ಠ ಸಾಧನೆ ತೋರಿದ್ದಾರೆ.
ವಿಲಾಸ್ ಶೆಟ್ಟಿ. ಪುನೀತ್ ಶೆಟ್ಟಿ
ಸಂಸ್ಥೆಯ ವಿದ್ಯಾರ್ಥಿಗಳಾದ ವಿಲಾಸ್ ಶೆಟ್ಟಿ, ಸಿಎ ಅಂತಿಮ ಪರೀಕ್ಷೆಯಲ್ಲಿ 528 ಅಂಕ ಗಳಿಸುವುದರೊಂದಿಗೆ ಉತ್ತಮ ಅಂಕಗಳೊಂದಿಗೆ ಸಿ.ಎ. ಕೋರ್ಸ್ ಪೂರ್ಣಗೊಳಿಸಿ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ. ಸಂಸ್ಥೆಯ ಪುನೀತ್ ಶೆಟ್ಟಿ 215 ಅಂಕಗಳೊಂದಿಗೆ ಸಿ.ಎ. ಅಂತಿಮ ಪರೀಕ್ಷೆಯ ಪ್ರಥಮ ಗ್ರೂಪಿನಲ್ಲಿ ತೇರ್ಗಡೆ ಹೊಂದಿ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.
ಶಿಕ್ಷಪ್ರಭಾ ಸಂಸ್ಥೆಯ ವಿದ್ಯಾರ್ಥಿಗಳು ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಕೂಡ ಅತ್ಯುತ್ತಮ ಸಾಧನೆ ತೋರಿದ್ದು ವಿದ್ಯಾರ್ಥಿಗಳಾದ ಅನುಷ್ಕ್ ಎ. ಕುಂದರ್ – 332, ಅಭಿಷೇಕ್ ಡಿ. 302, ಕಿರಣ್ ಕಾಮತ್ 299, ಆದಿತ್ಯ ದೇವಾಡಿಗ 298, ಜೆಸಿತಾ ಡಿ. 284, ರಾಮನಾಥ ಶೆಣೈ 282, ಸುಪ್ರೀತಾ 274, ಶ್ರೇಯಾ ಭಟ್, 268, ರೋಹನ್ ಶೆಟ್ಟಿ 266, ಅಭಿಶ್ರೀ 263, ಮಂದಾರಾ 260, ಭುವನ್ ರಾಜ್ ಶೆಟ್ಟಿ 252, ಹರೀಶ್ ನಾಯ್ಕ್ 248, ವಿಖ್ಯಾತ್ 248, ಚೇತನಾ 245, ರವಿಕಿರಣ್ 245, ಅಮೃತಾ ಕೆ. 243, ನಾದಶ್ರೀ 240, ಶ್ರೀಷನ್ ಶೆಟ್ಟಿ 240, ರಾಘವೇಂದ್ರ ಪೂಜಾರಿ 238, ಅಕ್ಷಿತಾ 234, ದೀಕ್ಷಾ ಶಾನುಭಾಗ್ 229, ಮನೀಷ್ ಕೋಟ 226, ಸಿಂಚನಾ 226, ವಿಜೇಂದ್ರ ಕಿಣಿ 224, ಸಹನಾ ಎಸ್. 223, ಶಮಂತ್ ಕೊಠಾರಿ 223, ಶಾಂಭವಿ ಬಂಗೇರ 222, ಆಹಿಷ್ ಶೆಟ್ಟಿ 216, ಪ್ರಿಯಾ ಶೆಟ್ಟಿ 215, ಶ್ರೀಮಾ ಶೆಟ್ಟಿ 215, ಅಕ್ಷತಾ 214, ಸ್ನೇಹಾ 214, ಅಕ್ಷತಾ ಟಿ. 209, ಅನುಷಾ 208, ಅರ್ಪಣ್ ಪೂಜಾರಿ 207, ಗ್ಲೇವಿತಾ 204, ವೈಷ್ಣವಿ ಶೆಟ್ಟಿ 204, ಮನೋಜ್ 202, ಚಿರಾಗ್ ಶೆಟ್ಟಿ 201, ಇಂಚರಾ 201 ಅಂಕಗಳೊಂದಿಗೆ ಸಿ.ಎ. ಪೌಂಡೇಶನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕೋವಿಡ್ ಸಂದರ್ಭದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಮತ್ತು ಭೋಧಕ ಸಿಬ್ಬಂದಿಗಳ ಪ್ರಯತ್ನಕ್ಕೆ ಫಲ ದೊರಕಿದೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ಸಂಸ್ಥೆಯ ಬೋಧಕ ಸಿಬ್ಬಂದಿಗಳ ಸತತ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಯಿತು ಎಂದು ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಅಭಿನಂದಿಸುವ ಸಂದರ್ಭದಲ್ಲಿ ನುಡಿದರು.
ನನ್ನ ಈ ಸಾಧನೆಗೆ ಬೆನ್ನೆಲುಬಾಗಿ ನಿಂತ ನನ್ನ ಪೋಷಕರು ಮತ್ತು ನನ್ನ ಬೋಧಕ ಸಿಬ್ಬಂದಿಗಳಿಗೆ ಧನ್ಯವಾದಗಳು, ಶಿಕ್ಷಪ್ರಭ ಅಕಾಡೆಮಿಯು ಶಿಕ್ಷಣದ ಜೊತೆಗೆ ವ್ಯಕ್ತಿತ ವಿಕಸನಕ್ಕೆ ಮಹತವನ್ನು ನೀಡುತ್ತದೆ. ಶಿಕ್ಷಪ್ರಭ ಅಕಾಡೆಮಿಯ ಗುಣಮಟ್ಟದ ಬೋಧಕ ಸಿಬ್ಬಂದಿಗಳು ನನ್ನಂತಹ ಅನೇಕ ವಿಧ್ಯಾರ್ಥಿಗಳ ಜೀವನದ ದಿಕ್ಕನ್ನೇ ಬದಲಿಸಿದ್ದಾರೆ.
– ಸಿ.ಎ. ವಿಲಾಸ್ ಶೆಟ್ಟಿ. (528 ಅಂಕಗಳು)
ಕೋವಿಡ್ ಸಂದರ್ಭದಲ್ಲಿ ಎರಡೆರಡು ಲಾಕ್ ಡೌನ್ ಅನುಭವಿಸಿದರೂ ಕೂಡ ಶಿಕ್ಷಪ್ರಭಾ ಸಂಸ್ಥೆಯು ನಿರಂತರವಾಗಿ ನಮ್ಮನ್ನು ಬೆಂಬಲಿಸುತ್ತಾ ಬಂದಿದೆ. ಸಂಸ್ಥೆಯ ಎಲ್ಲಾ ಬೋಧಕ ಸಿಬ್ಬಂದಿಗಳಿಗೆ ಚಿರೠಣಿಯಾಗಿದ್ದೇನೆ. ನನ್ನ ಮುಂದಿನ ಸಿ.ಎ. ಇಂಟರ್ಮಿಡಿಯೇಟ್ ಮತ್ತು ಸಿ.ಎ. ಪೈನಲ್ ಕೋರ್ಸ್ಗಳನ್ನು ಶಿಕ್ಷಪ್ರಭಾ ಅಕಾಡೆಮಿಯಲ್ಲಿ ಮುಂದುವರಿಸಿ ಪ್ರಥಮ ಪ್ರಯತ್ನದಲ್ಲೇ ಲೆಕ್ಕ ಪರಿಶೋಧಕನಾಗುವ ಕನಸನ್ನು ಹೊತ್ತಿದ್ದೇನೆ.
ಅನುಷ್ಕ್ ಕುಂದರ್, ಸಿ. ಎ. ಫೌಂಡೇಶನ್ ಉತ್ತೀರ್ಣ ವಿಧ್ಯಾರ್ಥಿ (332 ಅಂಕಗಳು)














