ಬಸ್ರೂರು (ಸೆ, 26): ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಬಸ್ರೂರಿನ ಮೂಡ್ಕೇರಿಯ ನಾಥ ಪರಂಪರೆಯ ಪ್ರಾಚೀನ ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಸೆಪ್ಟೆಂಬರ್26 ರಂದು ಸ್ವಚ್ಚತಾ ಕಾರ್ಯ “ನಿರ್ಮಲ ದೇಗುಲ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಸಾರ್ವಜನಿಕ ಸಂಪರ್ಕಾಧಿಕಾರಿ ನಾಗರಾಜ್ ಶೆಟ್ಟಿ ನೈಕಂಬ್ಳಿ , ನಿಕಟಪೂರ್ವ ಎನ್.ಎಸ್.ಎಸ್ ಯೋಜನಾಧಿಕಾರಿ ಸತೀಶ್ ಶೆಟ್ಟಿ, ಸುಕುಮಾರ ಶೆಟ್ಟಿ ಕಮಲಶಿಲೆ, ರಸಿಕ್ ಶೆಟ್ಟಿ, ದೇವಾಲಯದ ಅರ್ಚಕರಾದ ಶ್ರೀ ದಯಾನಂದ ಜೋಗಿ ಮತ್ತು ಕಟುಂಬಸ್ಥರು, ಸ್ವರಾಜ್ಯ 75 ಕಾರ್ಯಕ್ರಮದ ಸಂಚಾಲಕ ಶ್ರೀ ಪ್ರದೀಪ್ ಕುಮಾರ್ ಬಸ್ರೂರು ಮತ್ತು ತಂಡದ ಸದಸ್ಯರಾಸ ಸಂತೋಷ ನೇರಳಕಟ್ಟೆ,ಸಂತೋಷ ಬಳ್ಕೂರು,ಭಾರ್ಗವ ಜೋಗಿ, ಸತೀಶ್ ಗುಂಡ್ಮಿ,ಭರತ್ ಗುಡಿಗಾರ್,ಪ್ರಶಾಂತ್ ಖಾರ್ವಿ, ರಾಘವೇಂದ್ರ ಬಳ್ಕೂರು,ಹಿರಿಯರಾದ ನಾಗಪ್ಪ ಬಿಲ್ಲವ, ಸುರೇಶ್ ಬಳ್ಕೂರು ಶಿಬಿರದಲ್ಲಿ ಭಾಗಿಯಾಗಿ ಕಾಲೇಜಿನ ಎನ್.ಎಸ್.ಎಸ್ ಘಟಕದ ಸ್ವಯಂಸೇವಕರ ಜೊತೆ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಎನ್.ಎಸ್.ಎಸ್ ವಿದ್ಯಾರ್ಥಿ ನಾಯಕಿ ಸುಷ್ಮಾ ಶೆಟ್ಟಿ , ಸ್ವಯಂಸೇವಕರು ಹಾಗೂ ಹಿರಿಯ ಎನ್.ಎಸ್ .ಎಸ್ ಸ್ವಯಂಸೇವಕರು ದೇವಾಲಯದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಎನ್ .ಎಸ್.ಎಸ್ ಸಹ ಯೋಜನಾಧಿಕಾರಿ ಶ್ರೀಮತಿ ರೇಷ್ಮಾ ಶೆಟ್ಟಿ ಸ್ವಾಗತಿಸಿದರು. ಯೋಜನಾಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿ,ಧನ್ಯವಾದಗೈದರು.