ಬಂಟಕಲ್ (ಆ, 01) : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಸೃಷ್ಟಿ ವೆಂಚರ್, ಪಡುಬಿದ್ರಿ ಇತ್ತೀಚೆಗೆ ಸಂಸ್ಥೆಯ ಆವರಣದಲ್ಲಿ ಒಡಂಬಡಿಕೆಯೊಂದನ್ನು ಮಾಡಿಕೊಂಡಿದೆ.
ಈ ಒಪ್ಪಂದದ ಪ್ರಕಾರ ಎರಡೂ ಸಂಸ್ಥೆಗಳು ಜೊತೆಗೂಡಿ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಅವಿಷ್ಕಾರ ನಡೆಸಲಿದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಪರಿಸರ ಸ್ನೇಹಿ ಮನೆ ಹಾಗೂ ಕಟ್ಟಡ ನಿರ್ಮಾಣದ ಬಗ್ಗೆ ಸಂಶೋಧನೆ ಮತ್ತು ಅಭಿವೃದ್ಧಿಯ ಕಾರ್ಯ ನಿರ್ವಹಿಸಲಿದೆ. ಇದರಿಂದ ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಿರ್ಮಾಣ ಕ್ಷೇತ್ರದ ಹೊಸ ತಂತ್ರಜ್ಞಾನಕ್ಕೆ ಭವಿಷ್ಯದಲ್ಲಿ ಸಿದ್ದರಾಗಲು ಅನುಕೂಲವಾಗಲಿದೆ.
ಕಾಲೇಜಿನ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮತ್ತು ಸೃಷ್ಟಿ ವೆಂಚರ್ನ ಮಾಲಕರಾದ ಶ್ರೀಯುತ ಭೂಪತಿ ಶೆಟ್ಟಿ ಯವರು ಸೆಪ್ಟೆಂಬರ್, 22 ರಂದು ಒಡಂಬಡಿಕಾ ಪತ್ರಕ್ಕೆ ಸಹಿ ಹಾಕಿದರು. ಸೃಷ್ಟಿ ವಂಚರ್ಸ್ ನ ಶ್ರೀಮತಿ ಸುಪ್ರೀಮಾ ಶೆಟ್ಟಿ, ವ್ಯವಸ್ಥಾಪಕ ಪಾಲುದಾರರಾದ ಶ್ರೀಯುತ ನಿಶ್ಚಯ್ ಶೆಟ್ಟಿ, ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಕಾಲೇಜಿನ ಸಿವಿಲ್ ವಿಭಾಗ ಮುಖ್ಯಸ್ಥರಾದ ಡಾ. ಸಂದೀಪ್ ಜೆ ನಾಯಕ್ ಹಾಗೂ ಸಿವಿಲ್ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.