ಕೋಟೇಶ್ವರ ( ಜೂ,20): ಶ್ರೀ ಮಹಾಲಿಂಗೇಶ್ವರ ಕಾಳಿಂಗ ಸುಬ್ರಹ್ಮಣ್ಯ ದೇವಸ್ಥಾನ ಕಾಳಾವರ ಇದರ ಜೀರ್ಣೋದ್ಧಾರ ಸಮಿತಿಯನ್ನು ಧಾರ್ಮಿಕ ದತ್ತಿ ಇಲಾಖೆ ಉಡುಪಿ 16 ಜನರನ್ನು ಆಯ್ಕೆ ಮಾಡಿ ಕಳುಹಿಸಿದೆ.
ನೂತನ ಅಧ್ಯಕ್ಷರಾಗಿ ಉದ್ಯಮಿ ಬಾಲಚಂದ್ರ ಶೆಟ್ಟಿ ಕಾಳಾವರ ನಾಯ್ಕರಮನೆ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ಕಾರ್ಯಾಧ್ಯಕ್ಷರಾಗಿ ಶಾನಾಡಿ ಚಂದ್ರಶೇಖರ ಹೆಗ್ಡೆ ಕೋಶಾಧಿಕಾರಿಯಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎ ಅಜಿತ್ ಕುಮಾರ ಶೆಟ್ಟಿ ಉಪಾಧ್ಯಕ್ಷರುಗಳಾಗಿ ಎಂ ವಿಶ್ವನಾಥ ಶೆಟ್ಟಿ, ಕೆ ಸುಧಾಕರ ಶೆಟ್ಟಿ, ಕೆ ರಂಜಿತ್ ಕುಮಾರ ಶೆಟ್ಟಿ, ಕಾರ್ಯದರ್ಶಿಯಾಗಿ ಕೆ ಉದಯ ಕುಮಾರ ಶೆಟ್ಟಿ, ಸಹ ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿಗಾರ, ಸಹ ಕೋಶಾಧಿಕಾರಿಯಾಗಿ ಕೆ ಸುರೇಶ ಎನ್ ಶೆಟ್ಟಿ ಸಮಿತಿ ಸದಸ್ಯರಾಗಿ ಪ್ರಭಾಕರ ಎನ್ ಶೆಟ್ಟಿ, ಪ್ರದೀಪಕುಮಾರ ಶೆಟ್ಟಿ, ರಶ್ಮಿ ವೈ ಶೆಟ್ಟಿ ವಕ್ವಾಡಿ, ರಘುವೀರ ಕೆ, ಅಚ್ಚುತ ದೇವಾಡಿಗ, ನವೀನ ಯಾನೆ ಬಲೀಂದ್ರ, ಲಲಿತಾ ಪೂಜಾರ್ತಿ ಆಯ್ಕೆಯಾಗಿರುತ್ತಾರೆ.