ಕುಂದಾಪುರ (ಅ,07): ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜಿನ ಸಂಪೂರ್ಣ ಆಡಳಿತದ ಚುಕ್ಕಾಣಿ ಹಿಡಿದು ಗುಣಮಟ್ಟದ ಶಿಕ್ಷಕರಿಂದ 6ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಆತ್ಯುತ್ತಮ ಶಿಕ್ಷಣ ಒದಗಿಸುತ್ತಿರುವ, ಶೈಕ್ಷಣಿಕ ಕ್ಷೇತ್ರದಲ್ಲಿ 30 ವರ್ಷಗಳ ಸುಧೀರ್ಘ ಅನುಭವವುಳ್ಳ ಸ್ವತಃ ಭೌತಶಾಸ್ತ್ರ ವಿಷಯದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಡಾ. ರಮೇಶ್ ಶೆಟ್ಟಿ ಯವರು ಅಧ್ಯಕ್ಷರಾಗಿರುವ, ಕುಂದಾಪುರದಲ್ಲಿ ಶಿಕ್ಷಪ್ರಭಾ ಆಕಾಡೆಮಿಯ ಮೂಲಕ ಸಿಎ ಮತ್ತು ಸಿಎಸ್ ಪರೀಕ್ಷೆಗೆ ರಾಷ್ಟ್ರೀಯ ಮಟ್ಟದಲ್ಲಿ ರ್ಯಾಂಕ್
ಗಳನ್ನು ನೀಡಿರುವ ಸಂಸ್ಥೆಯ ಮುಖ್ಯಸ್ಥರುಗಳಾಗಿ, ಕಾರ್ಯದರ್ಶಿ ಮತ್ತು ಖಜಾಂಚಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರತಾಪಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಯವರು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಮೂಡಬಿದ್ರಿ ಕುಂದಾಪುರದಲ್ಲಿ ಸಿಇಟಿ/ನೀಟ್/ಜೆಇಇ ಪರೀಕ್ಷೆಗೆ ರಾಷ್ಟ್ರೀಯ ಮಟ್ಟದಲ್ಲಿ ತರಭೇತಿಯನ್ನು ನೀಡಲು ಸುಪ್ರಭಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಂಬ ನೂತನ ಸಂಸ್ಥೆಯನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕುಂದಾಪುರದ ಕುಂದೇಶ್ವರ ರಸ್ತೆಯ ಸಿರಿ ಬಿಲ್ಡಿಂಗ್ನಲ್ಲಿ ಪ್ರಾರಂಬಿಸುತ್ತಿದ್ದು, ಈ ಸಂಸ್ಥೆಯನ್ನು ರಾಮ ಜನ್ಮಾಭೂಮಿ ಪ್ರತಿಷ್ಠಾನದ ಟ್ರಸ್ಟಿಯಾಗಿರುವ ಉಡುಪಿ ಪೇಜಾವರ ಮಠದ ಶ್ರೀಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯವರು ತಮ್ಮ ಅಮೃತ ಹಸ್ತದಿಂದ ಉದ್ಘಾಟನೆಗೈದಿದ್ದಾರೆ.
ಸಿಇಟಿ/ ನೀಟ್ / ಜೆಇಇ ತರಬೇತಿ ಸುಪ್ರಭಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯ ಕುಂದೇಶ್ವರ ರಸ್ತೆಯ ಸಿರಿ ಬಿಲ್ಡಿಂಗ್ ನ ಮೂರನೆ ಮಹಡಿಯಲ್ಲಿ ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸೈನ್ಸ್ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ/ನೀಟ್/ ಜೆಇಇ ಮೈನ್ ಎನ್ಟಿಎಸ್ಇ ಪರೀಕ್ಷೆಗಳಿಗೆ ಉತ್ತಮ ಬೋಧಕ ಸಿಂಬಂಧಿಗಳ ನೆರವಿನಿಂದ ತರಬೇತಿ ನೀಡಲು ಸಿದ್ಧಗೊಂಡಿದ್ದು, ಅನುಭವಿ ಶಿಕ್ಷಣದ ಜೊತೆಗೆ ಗುಣಮಟ್ಟದ ಕಲಿಕಾ ಸಾಮಾಗ್ರಿಯನ್ನು ಒಳಗೊಂಡ ನಿರಂತರ ಪೂರಕ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳ ಸಿಇಟಿ/ ನೀಟ್ / ಜೆಇಇ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಲು ಸಹಾಕಾರಿಯಾಗುವ ಕೆಲಸಕ್ಕೆ ಕೈ ಹಾಕಿದೆ.
ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬೋರ್ಡ್ ಪರೀಕ್ಷೆಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷಿಯ ತರಬೇತಿಯನ್ನು ನೀಡುತ್ತಿದೆ. ಅನುಕೂಲವಾಗುವಂತೆ ಬ್ಯಾಟ್ ಸಿದ್ಧಗೊಳಿಸಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕ ವಿಕೆಂಡ್ ಬ್ಯಾಚ್ ಮತ್ತು ವಿಕ್ ಡೇಸ್ ಬ್ಯಾಚ್ಗಳನ್ನು ಆರಂಭಿಸಿದೆ.
ನೀಟ್ ಲಾಂಗ್ ಟರ್ಮ ಬ್ಯಾಚ್ : ನೀಟ್ 2021ರಲ್ಲಿ ಪರೀಕ್ಷೆ ಪಡೆಯಲು ಇಚ್ಚಿಸದ ರಿಪೀಟರ್ ವಿದ್ಯಾರ್ಥಿಗಳಿಗೆ ಒಂದು ವರ್ಷದ ನೀಟ್ ಲಾಂಗ್ ಟರ್ಮ ಬ್ಯಾಚ್ ಆರಂಭಿಸಿದ್ದು, ಇದರೊಂದಿಗೆ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ವರ್ಷದ ನೀಟ್ ಪರೀಕ್ಷೆಯಲ್ಲಿ ಸಮಾಧಾನಕರ ಆಂಕ ಪಡೆಯದ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದ ನೀಟ್ ಪರೀಕ್ಷೆಗೆ ಒಂದು ವರ್ಷ ನಿರಂತರ ತರಬೇತಿ ಪಡೆಯಲು ಇದು ಸಹಕಾರಿ ಆಗಲಿದೆ.
ಈ ಮೇಲಿನ ಎಲ್ಲ ತರಗತಿಗಳು ಆಕ್ಟೋಬರ್ 15, 2021 ರಿಂದ ಕುಂದೇಶ್ವರ ರಸ್ತೆಯ ಸಿರಿ ಬಿಲ್ಡಿಂಗ್ನಲ್ಲಿ ಆರಂಭವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ ಕುಂದೇಶ್ವರ ರಸ್ತೆಯ ಶಿಕ್ಷಪ್ರಭಾ ಆಕಾಡೆಮಿ ಕಚೇರಿಗೆ ಅಥವಾ ಸುಪ್ರಭಾ ಇನ್ಸ್ಟಿಟ್ಯೂಟ್ ಆಫ್ ಸೈನ್ಗೆ ಭೇಟಿ ನೀಡಬಹುದು. ಎಂದು ಸಂಸ್ಥೆಯ ಅಧ್ಯಾಕ್ಷರಾಗಿರುವ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ಚಂದ್ರ ಶೆಟ್ಟಿ ಮತ್ತು ಖಜಾಂಚಿ ಭರತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.