ಗಂಗೊಳ್ಳಿ (ನ,28): ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿಯಲ್ಲಿ ನ.27ದಂದು ಕಬಡ್ಡಿ ಅಂಕಣದ ಆಧುನಿಕ ವ್ಯವಸ್ಥೆಯಾದ ಕಬ್ಬಡ್ಡಿ ಮ್ಯಾಟ್ ನ್ನು ಉದ್ಯಮಿ ಹಾಗೂ ಶಾಲಾ ಅಭಿಮಾನಿಯಾದ ಶ್ರೀಯುತ ವೀರೇಶ್ ರವರು ಉದ್ಘಾಟಿಸಿದರು. ಇವರೊಂದಿಗೆ ಎಲ್ಲಾ ದಾನಿಗಳು ಇದನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು.
ಸ್ಥಳೀಯ ಚರ್ಚಿನ ವಂದನೀಯ ಧರ್ಮಗುರುಗಳಾದ ಥಾಮಸ್ ರೋಷನ್ ಆಶೀರ್ವಚನಗೈದರು. ಕಾರ್ಯಕ್ರಮದ ಅಧ್ಯಕ್ಷರಾದ ಶಾಲಾ ಜಂಟಿ ಕಾರ್ಯದರ್ಶಿ ಭಗಿನಿ ತೆರೇಸಾ ಜ್ಯೋತಿ, ಮುಖ್ಯೋಪಾಧ್ಯಾಯಿನಿ ಭಗಿನಿ ಕ್ರೇಸೆನ್ಸ್, ಹಳೆವಿದ್ಯಾರ್ಥಿಗಳಲ್ಲಿ ಪ್ರಮುಖರಾದ ಶ್ರೀಯುತ ಮಂಜುನಾಥ,ಶಿಕ್ಷಕ ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು. ಫೆಲ್ಸಿಯಾನಾ ಡಿಸೋಜ ವಂದಿಸಿದರು, ಶಿಕ್ಷಕ ಗಣೇಶ ಹೆಬ್ಬಾರ್ ನಿರೂಪಿಸಿದರು.